December 22, 2024

Bhavana Tv

Its Your Channel

ನಾಯಿಯಿಂದ ತಪ್ಪಿಸಿಕೊಂಡು ಸಮುದ್ರದತ್ತ ತೆರಳಿ ಅಪಾಯಕ್ಕೆ ಸಿಲುಕಿದ್ದ ಹಸು, ಮೀನುಗಾರರಿಂದ ರಕ್ಷಣೆ

ಮುರ್ಡೇಶ್ವರ ; ಲಾಕ್‌ಡೌನ್ ನಿಂದಾಗಿ ಪ್ರಾಣಿಗಳು ಸಹ ಸಂಕಷ್ಟದಲ್ಲಿ ಸಿಲುಕಿದೆ, ಆಹಾರವಿಲ್ಲದೇ ಅವು ಸಹ ಆಹಾರ ಹಡುಕುತ್ತಾ ಎಲ್ಲೆಲ್ಲಾ ಸಾಗುತ್ತಿದೆ, ಈ ಸಂದರ್ಬದಲ್ಲಿ ಮುರ್ಡೇಶ್ವರ ಸಮುದ್ರ ತೀರದ ಬಳಿ ಆಹಾರ ಹುಡುಕಿಕೊಂಡು ಹಸುವನ್ನು ಸಾಗುತ್ತಿದ್ದಾಗ ಅಲ್ಲಿದ್ದ ಬೀದಿನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು. ಈ ವೇಳೆ ಬೆದರಿದ ಹಸುವು ಸಮುದ್ರದತ್ತ ಓಡಿ ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಇಳಿದಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿ ಸಾಕಷ್ಟು ಮುಂದಕ್ಕೆ ತೆರಳಿದ್ದು ವಾಪಸ್ ದಡಕ್ಕೆ ಬರಲಾಗದೇ ಪರದಾಡುತ್ತಿತ್ತು.

ಇದೇ ವೇಳೆ ನಾಡದೋಣಿ ಮೀನುಗಾರಿಕೆ ನಡೆಸಿಕೊಂಡು ದಡಕ್ಕೆ ವಾಪಸ್ಸಾಗುತ್ತಿದ್ದ ಮೀನುಗಾರ ಹಸುವು ನೀರಿನಲ್ಲಿ ಸಿಲುಕಿಕೊಂಡು ಗಾಬರಿಗೊಂಡಿದ್ದನ್ನು ಗಮನಿಸಿದ್ದಾನೆ. ಬಳಿಕ ದೋಣಿಯಿಂದ ಅದರ ಬಳಿಗೆ ತೆರಳಿ ಅದರ ಕುತ್ತಿಗೆಯಲ್ಲಿದ್ದ ಹಗ್ಗದ ಸಹಾಯದಿಂದ ಅದನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದಾನೆ ಈ ವೇಳೆ ದಡದಲ್ಲಿದ್ದ ಮತ್ತೊಂದು ಬೋಟಿನ ಮೀನುಗಾರರು ಸಹ ಹಸುವನ್ನು ದಡಕ್ಕೆ ತರುವಲ್ಲಿ ಸಹಕರಿಸಿದ್ದು ಅಪಾಯಕ್ಕೆ ಸಿಲುಕಿದ್ದ ಹಸುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

error: