January 26, 2025

Bhavana Tv

Its Your Channel

ಕೊವಿಡ್ ೧೯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ತನ್ನದೆ ಆದ ವಿಶಿಷ್ಟ ರೀತಿಯಲ್ಲಿ ಸಹಾಯ ಹಸ್ತ ನೀಡಿದ ಶ್ರೀ ಶಂಭುಲಿOಗೇಶ್ವರ ಸಾಂಸ್ಕçತಿ ಹಾಗೂ ಕ್ರೀಡಾ ಸಂಘ ಮೂಡ್ಕಣಿ

ಹೊನ್ನಾವರ ; ಈಡಿ ವಿಶ್ವವೇ ಕೋವಿಡ್ ೧೯ ಸಾಂಕ್ರಾಮಿಕ ರೋಗಕ್ಕೆ ತತ್ತರಿಸಿದೆ. ವಿಶ್ವದ ಬಹುತೇಕ ದೇಶಗಳು ಈ ರೋಗದಿಂದ ಮುಕ್ತಗೊಳಿಸಲು ಹತಾಶರಾಗುತ್ತಿರುವ ಸಂದರ್ಭದಲ್ಲಿ ನಮ್ಮ ದೇಶ ತಮ್ಮದೆ ತನ್ನದೆ ಆದ ಕೆಲವೊಂದು ಸೂತ್ರ ಮತ್ತು ಮಾರ್ಗದರ್ಶನ ಹಾಗೂ ಕೆಲವೊಂದು ದಿಟ್ಟ ನಿರ್ಧಾರಗಳಿಂದ ದಾನಿಗಳಿಂದ, ಅಧಿಕಾರಿಗಳಿಂದ, ಸಂಘ ಸಂಸ್ಥೆಗಳಿoದ ಸಾಮಾನ್ಯ ಹಂತಕ್ಕೆ ಬಂದು ನಿಂತಿದೆ. ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕಿನ ಮೂಡ್ಕಣಿಯ ಶ್ರೀ ಶಂಭುಲಿoಗೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮೂಡ್ಕಣಿ ಗ್ರಾಮದಲ್ಲಿ ತನ್ನದೆ ಆದ ಸಹಾಯ ಸಹಕಾರ , ಜಾಗ್ರತಿಗಳನ್ನು ಮಾಡುತ್ತಾ ಬಂದಿದೆ. ಈಗಾಗಲೆ ಸಂಘವು ಅಯ್ಯಪ್ಪ ಭಕ್ತ ಮಂಡಳಿ ಸೇರಿ ಸುಮಾರು ೩೦೦ ಕುಟುಂಬಗಳಿಗೆ ಉಚಿತವಾಗಿ ಮಾಸ್ಕ ವಿತರಿಸಿರುತ್ತಾರೆ. ತೀರಾ ಅವಶ್ಯವಿದ್ದ ಔಷದಿಗಳನ್ನು ಪಟ್ಟಣಕ್ಕೆ ಹೋಗಿ ತರಿಸಿಕೊಡುತ್ತಿದ್ದಾರೆ. ಗ್ರಾಮದಲ್ಲಿ ಯಾವುದೇ ತೊಂದರೆ ಇದ್ದರೂ ತಕ್ಷಣ ಸ್ಪಂದಿಸುತ್ತಿದ್ದಾರೆ. ಈ ಎಲ್ಲ ಕಾರ್ಯಕ್ಕೆ ಸಂಘದ ಅಧ್ಯಕ್ಷರಾದ ಕಮಲಾಕರ ಅಂಬಿಗ, ಉಪಾಧ್ಯಕ್ಷ ರಾಜು ನಾಯ್ಕ, ಮೇಘರಾಜ ಆಚಾರಿ ಅಯ್ಯಪ್ಪ ಭಕ್ತ ಮಂಡಳಿ ಅಧ್ಯಕ ಶ್ರೀಕಾಂತ ನಾಯ್ಕ, ಸತೀಶ ನಾಯ್ಕ ತಾಲೂಕ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಹಾಗೂ ಸಂಘದ ಸರ್ವ ಸದಸ್ಯರು ಸಹಕಾರ ನೀಡುತ್ತಿದ್ದಾರೆ.

error: