December 21, 2024

Bhavana Tv

Its Your Channel

ಸೇಫ್ ಸ್ಟಾರ್ ಸೌಹಾರ್ದದಿಂದ ಪಿಗ್ಮಿ ಏಜಂಟರಿಗೆ ಧನಸಹಾಯ

ಹೊನ್ನಾವರ ; ಸಹಕಾರಿ ಕ್ಷೇತ್ರದಲ್ಲಿ ಕಳೆದ ೯ ವರ್ಷಗಳಿಂದ ನಿರಂತರ ಯಶಸ್ಸಿನ ದಾಪುಗಾಲು ಹಾಕುತ್ತ ಜಿಲ್ಲೆಯ ಮಾದರಿ ಹಾಗೂ ರಾಜ್ಯಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಅಧ್ಯಕ್ಷರಾದ ಶ್ರೀ ಜಿ.ಜಿ.ಶಂಕರ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಜಿಲ್ಲಾದ್ಯಂತ ೧೧ ಶಾಖೆಗಳನ್ನು ಹೊಂದಿರುವ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಪ್ರಧಾನಕಛೇರಿ ಹೊನ್ನಾವರ ಇದು ಆರಂಭದಿoದಲೂ ನಿರಂತರ ಒಂದಿಲ್ಲೊoದು ಸಾಮಾಜಿಕ ಕಳಕಳಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವದು ಕಂಡು ಬಂದಿರುತ್ತದೆ.
ಈ ಹಿಂದೆ ನೆರೆಪೀಡಿತ ಸಂದರ್ಭದಲ್ಲಿ ಧನಸಹಾಯ ಮಾಡುವದರೊಂದಿಗೆ ಅವರುಗಳಿಗೆ ಬಿಸ್ಕತ್, ಹಣ್ಣುಹಂಪಲಗಳನ್ನು ನೀಡಿದ್ದಲ್ಲದೇ ಜಿಲ್ಲೆಯ ಹಲವಾರು ಜನರುಗಳಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಹಾಯವನ್ನು ಮಾಡಿರುತ್ತದೆ. ಆದರೆ ಯಾವುದೇ ಪ್ರಚಾರವನ್ನು ಬಯಸದೇ ತೆರೆಮರೆಯಲ್ಲಿಯೇ ತನ್ನ ಸಹಾಯ ಹಸ್ತವನ್ನು ಚಾಚುತ್ತ ಬಂದಿರುವ ಸಹಕಾರಿಯು ಇದೀಗ ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೋವಿಡ್-೧೯ ಮಹಾಮಾರಿ ಸೋಂಕಿನಿoದ ಭಾರತ ದೇಶವೇ ಲಾಕಡೌನ್‌ನಿಂದಾಗಿ ಕಂಗೆಟ್ಟಿರುವ ಸಂದರ್ಭದಲ್ಲಿ ತಾನು ಮಾಡುವ ಸಹಾಯಇತರರಿಗೂ ಪ್ರೇರಣೆಯಾಗಲಿ ಇದರಿಂದ ನಮ್ಮರಾಜ್ಯ ಮತ್ತು ದೇಶಕ್ಕೆ ಇನ್ನೂ ಹೆಚ್ಚಿನ ರೀತಿಯ ಸಹಾಯವಾಗಲಿ ಎಂಬ ದೃಷ್ಟಿಯಿಂದ ಇತ್ತೀಚೆಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿ ಪ್ರಧಾನ ಮಂತಿ ್ರ ಪರಿಹಾರ ನಿಧಿಗೆ ರೂ೧.೫೦ ಲಕ್ಷ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ೧.೦೦ ಲಕ್ಷಒಟ್ಟೂ ರೂ೨.೫೦ ಲಕ್ಷ ನೀಡಿರುವದನ್ನು ಜಿಲ್ಲೆ ಸ್ಮರಿಸುತ್ತಿದೆ.
ಹಾಗೆಯೇ ಸಹಕಾರಿಯು ತನ್ನ ಎಲ್ಲಾ ಹನ್ನೊಂದು ಶಾಖೆಯ ಸುಮಾರು ೭೦ ಪಿಗ್ಮಿ ಸಂಗ್ರಾಹಕರು ಪಿಗ್ಮಿ ಸಂಗ್ರಹಣೆ ಮಾಡಿ ಅದರಿಂದ ಬರುವ ಕಮಿಷನ್‌ನ್ನೇ ತಮ್ಮ ಆದಾಯವನ್ನಾಗಿ ನೆಚ್ಚಿಕೊಂಡಿದ್ದು ಕಳೆದ ಒಂದು ತಿಂಗಳಿನಿoದ ಲಾಕಡೌನ್ ನಿಂದಾಗಿ ಪಿಗ್ಮಿ ಸಂಗ್ರಹಣೆ ಸಾಧ್ಯವಾಗದೇ ಶೋಚನೀಯ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಈ ಕುರಿತು ಕೂಲಂಕುಷ ಪರಿಶೀಲನೆ ಮಾಡಿ ತಕ್ಷಣ ಅವರ ನೆರವಿಗೆ ಧಾವಿಸಿ ಎಲ್ಲಾ ಪಿಗ್ಮಿ ಸಂಗ್ರಾಹಕರಿಗೂಇದೇ ಏಪ್ರಿಲ್ ೨೦೨೦ ಮಾಸಿಕ ಅಂತ್ಯದಲ್ಲಿ ಜೀವನೋಪಾಯಕ್ಕೆ ಬೇಕಾದ ಆರ್ಥಿಕ ಸಹಾಯ ಮಾಡಿ ಅವರುಗಳಿಗೆ ಪ್ರೋತ್ಸಾಹ ನೀಡುವದರ ಮೂಲಕ ಮತ್ತೊಮ್ಮೆ ತನ್ನ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುತ್ತದೆ. ಬಹುಶಃ ಇಡೀ ಜಿಲ್ಲೆಯಲ್ಲಿಯೇ ಈ ರೀತಿ ತನ್ನ ಪಿಗ್ಮಿ ಸಂಗ್ರಾಹಕರಿಗೆ ಆರ್ಥಿಕ ಸಹಾಯ ಮಾಡಿದ ಪ್ರಥಮ ಸಹಕಾರಿ ಎಂದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿ ಅಧ್ಯಕ್ಷ ಜಿ.ಜಿ. ಶಂಕರ, ಉಪಾಧ್ಯಕ್ಷ ವಿ.ಎಸ್. ಕಿಮಾನಿಕರ, ಆಡಳಿತ ಮಂಡಳಿ ನಿರ್ದೇಶಕರುಗಳು, ಜನರಲ್ ಮೆನೇಜರ್ ಮಹೇಶ ಶೆಟ್ಟಿ, ಎ.ಜಿ.ಎಂ.ಎಡ್ವಿನ್‌ರೆಬೆಲ್ಲೋ, ಚೀಫ್ ಮೆನೇಜರ್ ವಸಂತ ನಾಯ್ಕ, ಐಟಿ ಮೆನೇಜರ್ ವಿಘ್ನೇಶ್ವರ ಹೆಗಡೆ, ಡೆವಲಪ್‌ಮೆಂಟ್‌ಆಫೀಸರ್ ಶ್ರೀಪಾದ ಭಟ್ಟ, ವ್ಯವಸ್ಥಾಪಕರುಗಳು, ಸಿಬ್ಬಂದಿಗಳು,ಎಲ್ಲಾ ಫೀಲ್ಡ್ ಎಕ್ಸಿಕ್ಸೂಟಿವ್‌ಗಳು ಉಪಸ್ಥಿತರಿದ್ದರು.
ಈ ದಿಶೆಯಲ್ಲಿ ಸಹಕಾರಿಯ ಸಮಸ್ತ ಪಿಗ್ಮಿ ಸಂಗ್ರಾಹಕರು ಸಂಸ್ಥೆಯ ಇಂಥ ಉದಾರ ಹಾಗೂ ಪಿಗ್ಮಿ ಸಂಗ್ರಾಹಕರ ಬಗ್ಗೆ ಸಹಕಾರಿಗೆ ಇರುವ ಅತೀವ ಕಾಳಜಿ ನೆನೆದು ಸಂತಸಪಟ್ಟು ಅಭಿನಂದನೆ ಸಲ್ಲಿಸದ್ದು ವಿಶೇಷವಾಗಿದೆ.

error: