April 20, 2024

Bhavana Tv

Its Your Channel

ಲಾಕ್​ಡೌನ್ ಸಡಿಲಿಕೆಯ ಬಳಿಕ ಕುಮಟಾ ಪಟ್ಟಣದ ಹಲವು ಮದ್ಯದಂಗಡಿ ಎದುರು ಸಾರ್ವಜನಿಕರು ಸೋಮವಾರ ಬೆಳಿಗ್ಗೆಯಿಂದ ಉದ್ದುದ್ದ ಸರತಿಯಲ್ಲಿ ನಿಂತು ಮದ್ಯ ಖರೀದಿಸಿದರು.

ಕುಮಟಾ ; ಸರ್ಕಾರ ಮದ್ಯ ಮಾರಾಟಕ್ಕೆ ಮೇ. ೪ ರಿಂದ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಮೊದಲ ದಿನವೇ ಮದ್ಯದಂಗಡಿಗಳೆದುರು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಗುರುತು ಹಾಕಿದ್ದು ಕೆಲವೆಡೆ ಸರತಿ ಸಾಲಿಗಾಗಿ ರಕ್ಷಣಾ ಬೇಲಿಗಳನ್ನು ಹಾಕಲಾಗಿತ್ತು. ಪೊಲೀಸರು ಕೂಡಾ ಹೆಚ್ಚಿನ ನಿಗಾ ವಹಿಸಿದ್ದರು.
ಸೋಮವಾರ ಬೆಳಿಗ್ಗೆ ಮದ್ಯದಂಗಡಿಗಳು ತೆರೆಯುವ ಮುನ್ನವೇ ಅಬಕಾರಿ ಉಪ ಅಽಕ್ಷಕ ಸಂತೋಷ ಕುಡಾಳಕರ ಆಗಮಿಸಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯ ಖರೀದಿಗೆ ಬಂದವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಎಲ್ಲೆಡೆ ಸೂಕ್ತ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ನಿಗದಿತ ಪ್ರಮಾಣದಲ್ಲೇ ಮದ್ಯ ಖರೀದಿಗೆ ಅವಕಾಶವಿದೆ. ನಿಗದಿತ ಸಮಯಾವಕಾಶದ ಬಳಿಕವೂ ಮಾರಾಟ ನಡೆಸುವುದು ಕಂಡುಬಂದಲ್ಲಿ ಮದ್ಯದಂಗಡಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

error: