July 14, 2024

Bhavana Tv

Its Your Channel

ಆದೇಶವಿಲ್ಲದಿದ್ದರೂ ಪಟ್ಟಣ ಭಾಗದಲ್ಲಿ ಅಂಗಡಿ ತೆರೆದ ಅಂಗಡಿಕಾರರು. ಕೊನೆಗೆ ಎಚ್ಚೆತ್ತ ಅಧಿಕಾರಿಗಳಿಂದ ಮಧ್ಯಾಹ್ನದ ಬಳಿಕ ಅಂಗಡಿ ಮುಚ್ಚುವಂತೆ ಆದೇಶ.

ಹೊನ್ನಾವರ ;ಕರೋನಾ ಸುರಕ್ಷತೆಗಾಗಿ ಸರ್ಕಾರ ಲಾಕ್ ಡೌನ್ ೩ಹಂತದಲ್ಲಿ ವಿಸ್ತರಣೆಯ ಅಂಗವಾಗಿ ಹಲವು ಅಂಗಡಿಗಳು ಹೊನ್ನಾವರ ಪಟ್ಟಣದಲ್ಲಿ ಸೋಮವಾರ ತೆರೆದಿದ್ದರು ಜಿಲ್ಲಾಧಿಕಾರಿಗಳಿಂದ ಅನುಮತಿ ಇರಲಿಲ್ಲ ತಾಲೂಕು ಆಡಳಿತ ಅನುಮತಿ ಇಲ್ಲದಿದ್ದರೂ ಅಂಗಡಿಗಳು ತೆರದಿದ್ದವು ಬಳಿಕ ಎಚ್ಚೆತ್ತ ಅಧಿಕಾರಿಗಳು ಸೋಮವಾರ ಮದ್ಯಾಹ್ನ ನಂತರ ಬಹುತೇಕ ಹಲವು ಅಂಗಡಿಗಳನ್ನು ಮುಚ್ಚಿಸುವ ಮೂಲಕ ನೂತನ ಆದೇಶ ಜಾರಿಗೆ ಬಂದ ಬಳಿಕವೇ ತೆರೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕರೋನಾ ಸುರಕ್ಷತೆಗಾಗಿ ಎರಡು ಹಂತದಲ್ಲಿ ಲಾಕ್ ಡೌನ್ ಮುಗಿದು ಮೂರನೇ ಹಂತದ ವಿಸ್ತರಣೆಯ ಪ್ರಥಮ ದಿನ ವಿವಿಧಡೆ ನಿಯಮ ಸಡಿಲಿಕೆ ಆಗಿರುದನ್ನು ಗಮನಿಸಿದ ಸಾರ್ವಜನಿಕರು ಹೊನ್ನಾವರ ಪಟ್ಟಣದತ್ತ ಆಗಮಿಸುತ್ತಿದ್ದರು. ಪಟ್ಟಣದ ಶರಾವತಿ ವೃತ್ತ ಸೇರಿದಂತೆ ಬಜಾರ್ ರಸ್ತೆ ಹಾಗೂ ಬಂದರು ಪ್ರದೇಶದಲ್ಲಿ ಜನಜಂಗುಲಿ ಏರ್ಪಟ್ಟಿತ್ತು. ಒಂದಡೆ ಹೆಲ್ಮಟ್ ಇಲ್ಲದೇ ಇನ್ನೊಂದಡೆ ಮಾಸ್ಕ ಧರಿಸದೇ ಬೇಕಾಬಿಟ್ಟಿ ತಿರುಗಾಟ ನಡೆಸುತ್ತಿದ್ದರು. ಇನ್ನೊಂದಡೆ ದೂರದ ಬೆಂಗಳೂರು ಸೇರಿದಂತೆ ವಿವಿಧ ತಾಲೂಕು ಜಿಲ್ಲೆಯಿಂದ ಹೊನ್ನಾವರಕ್ಕೆ ಆಗಮಿಸುತ್ತಿದ್ದಾರೆ. ಸರ್ಕಾರಿ ಬಸ್ಸುಗಳಿಂದ ಆಗಮಿಸುವ ಎಲ್ಲರಿಗೂ ತಾಲೂಕ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಹೋಮ್ ಕ್ವಾರೆಟೈನ್ ಇಡಲು ಸೂಚಿಸುತ್ತಿದ್ದಾರೆ. ಇದು ತಾಲೂಕಿನವರಿಗೆ ಹೊಸ ಆತಂಕ ಮೂಡಿದೆ ಇನ್ನೊಂದಡೆ ತಾಲೂಕಿಗೆ ಅಂಗಡಿಗಳು ತೆರೆಯುವುದು ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದ್ದು ಅಧಿಕಾರಿಗಳು ಯಾವಾಗ ಅನುಮತಿ ನೀಡಲಿದ್ದಾರೆ ಎಂದು ಅಂಗಡಿ ಮಾಲಿಕರು ಕಾತುರದಿಂದ ಕಾಯುತ್ತಿದ್ದಾರೆ.
ಸೋಮವಾರ ಪಟ್ಟಣದಲ್ಲಿ ಅಂಗಡಿಗಳು ಬೆಳಿಗ್ಗೆ ತೆರೆದಿದ್ದರೆ, ಮಧ್ಯಾಹ್ನದ ಬಳಿಕ ಮುಚ್ಚಿಸುವಲ್ಲಿ ಅಧಿಕಾರಿಗಳು ಮುಂದಾದರು ಬಸ್ ನಿಲ್ದಾಣವು ಬಿಕೋ ಎನಿಸುತ್ತಿದ್ದು ಬಾರ್ ಗಳು ತೆರೆದಿದ್ದು ಪೆಟ್ರೂಲ್ ನೀಡಲು ಕೆಲ ದಿನದಿಂದ ಪಾಸ್ ಕಡ್ಡಾಯವಾಗಿತ್ತು ಆದರೆ ಇಂದು ಇದಕ್ಕೆ ಸಡಿಲಿಕೆ ವ್ಯಕ್ತವಾದ ಹಿನ್ನಲೆಯಲ್ಲಿ ಪೆಟ್ರೂಲ್ ಬಂಕ್ ಮುಂದೆ ಉದ್ದನೆಯ ಕ್ಯೂ ಏರ್ಪಟ್ಟಿತ್ತು.
ಸಾಮಾಜಿಕ ಅಂತರವಿಲ್ಲದೆ ಪಾಸ್ ವಿತರಣೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದ್ದ ಇಲಾಖೆಯಿಂದಲೇ ಉಲ್ಲಂಘನೆ.
ತಾಲೂಕಿನಿಂದ ಹೊರ ತಾಲೂಕಿಗೆ ಹೋಗಲು ತಹಶೀಲ್ದಾರ ಕಛೇರಿಯಲ್ಲಿ ಕೌಂಟರ್ ತೆರೆಯಲಾಗಿದ್ದು ಕೌಂಟರ್ ಎದುರಗಡೆ ಸಾಮಾಜಿಕ ಅಂತರ ಮರೆತಿದ್ದು ಕೆಲ ಸಾರ್ವಜನಿಕರು ಮಾಸ್ಕ ಕೂಡಾ ಧರಿಸಿರಕಲಿಲ್ಲ ಕಛೇರಿಯ ಕಿಡಕಿಗೆ ಮುತ್ತಿಗೆ ಹಾಕಿರುವುದು ಸಾರ್ವಜನಿಕರ ಅರಿವು ಮೂಡಿಸಬೇಕಾದ ಇಲಾಖೆಯಲ್ಲಿ ಮರೆತಿರುವುದು ವಿಪರ್ಯಾಸವಾಗಿತ್ತು.

error: