February 13, 2025

Bhavana Tv

Its Your Channel

ಕೃಷಿ ಸಚೀವ ಬಿ.ಸಿ.ಪಾಟೀಲ್ ಹೊನ್ನಾವರಕ್ಕೆ ಕಾರ್ಯಕರ್ತರಿಂದ ಶಾಲು ಹೊದಿಸಿ ಸನ್ಮಾನ.

ಹೊನ್ನಾವರ ; ರಾಜ್ಯದ ಕೃಷಿ ಸಚೀವರಾದ ಬಿ.ಸಿ ಪಾಟೀಲ ಉಡುಪಿಗೆ ತೆರಳುವ ಮಾರ್ಗ ಮಧ್ಯೆ ಹೊನ್ನಾವರದ ಶರಾವತಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದರು. ತಾಲೂಕಿನಲ್ಲಿ ಅಕಾಲಿಕವಾಗಿ ಸುರಿದ ಗಾಳಿ ಮಳೆಗೆ ಕೃಷಿ ತೋಟಗಾರಿಕೆ ಬೆಳೆಗೆ ಆದ ಹಾನಿಗೆ ಸರ್ಕಾರದಿಂದ ಪರಿಹಾರ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ವಿವಿಧ ಜಿಲ್ಲೆಯಲ್ಲಿ ಅಂತಹ ಸಮಸ್ಯೆ ಇದುವರೆಗೆ ಎದುರಾದಂತೆ ಕಾಣುತ್ತಿಲ್ಲ. ಕೆಲವಡೆ ಗಾಳಿ ಮಳೆಗೆ ಕೃಷಿ ಬೆಳೆಗೆ ಹಾನಿ ಸಂಭವಿಸಿದ್ದಲ್ಲಿ ಅಧಿಕಾರಿಗಳಖಿಂದ ವರದಿ ಪಡೆದು ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂಧರ್ಬದಲ್ಲಿ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತ, ವಿಜು ಕಾಮತ್, ಮುಖಂಡರಾದ ಲೋಕೇಶ ಮೇಸ್ತ, ದತ್ತಾತ್ರೇಯ ಮೇಸ್ತ ಹಾಜರಿದ್ದರು.

error: