December 6, 2024

Bhavana Tv

Its Your Channel

ಭಟ್ಕಳದಲ್ಲಿ ಮತ್ತೆ ಕೋವಿಡ್- ೧೯ ಪಾಸಿಟಿವ್!!

ಭಟ್ಕಳ: ಭಟ್ಕಳ ಕೇಸರಿ ಜೋನ್ ನಿಂದ ಹಸಿರು ಜೋನ್‌ಗೆ ಬರುತ್ತೇವೆ ಎಂದು ಕಾದು ಕುತಿತವರಿಗೆ ಇನ್ನೊಂದು ಶಾಕ್, ಕಳೆದ ೨೦ ದಿನಗಳಿಂದ ಕೊರೋನಾ ಸೋಂಕಿತ ಪ್ರಕರಣಗಳಿಲ್ಲದೆ ಸಹಜ ಸ್ಥಿತಿಯತ್ತ ಮರಳುತ್ತಿದ್ದ ಜಿಲ್ಲೆಯ ಜನತೆ ಮತ್ತೆ ಆತಂಕಿತರಾಗುವ ಸುದ್ದಿ ಇಲ್ಲಿದೆ.

ಪಟ್ಟಣದ ೧೮ ವರ್ಷದ ಯುವತಿಯೊಬ್ಬಳಲ್ಲಿ ಕೋವಿಡ್- ೧೯ ಸೋಂಕು ಪತ್ತೆಯಾಗಿದ್ದು, ಯಾರ ಸಂಪರ್ಕದಿAದ ಬಂದಿದೆ ಎನ್ನುವುದೇ ಪತ್ತೆಯಾಗದಾಗಿದೆ.

ಎರಡು ದಿನಗಳ ಹಿಂದೆ ಕೊರೋನಾ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಈಕೆ, ವೈದ್ಯರ ಶಿಫಾರಸ್ಸಿನ ಮೇಲೆ ಹೋಮ್ ಕ್ವಾರಂಟೈನ್ ಆಗಿದ್ದಳು. ಪ್ರಯೋಗಾಲಯಕ್ಕೆ ಕಳುಹಿಸಿದ್ದ, ಇಂದು ಬಂದ ಗಂಟಲಿನ ದ್ರವದ ಮಾದರಿಯ ವರದಿಯಲ್ಲಿ ಪಾಸಿಟಿವ್ ಬಂದಿದೆ. ಈಕೆ ಸೋಂಕು ತಗುಲಿ ಗುಣಮುಖರಾದವರವನ್ನು ಕ್ವಾರಂಟೈನ್ ನಲ್ಲಿ ಇಟ್ಟಿದ್ದ ಹೋಟೆಲ್ ಮಾಲೀಕರೊಬ್ಬರ ಪುತ್ರಿ ಎನ್ನಲಾಗಿದೆ.

ಮನೆಯಲ್ಲೇ ಇದ್ದ ಈಕೆ, ವಿದೇಶಕ್ಕೂ ಹೋಗಿಲ್ಲ, ವಿದೇಶದಿಂದ ಬಂದವರ ಸಂಪರ್ಕಕ್ಕೂ ಹೋಗಿರಲಿಲ್ಲ ಎನ್ನಲಾಗುತ್ತಿದೆ. ಆದರೂ ಹೇಗೆ ಸೋಂಕು ತಗುಲಿದೆ ಎಂಬ ಪ್ರಶ್ನೆ ಈಗ ಅಧಿಕಾರಿ ವಲಯಗಳಲ್ಲಿ ಕಾಡಲಾರಂಭಿಸಿದೆ. ಇದೀಗ ಸೋಂಕು ಯಾರಿಂದ ತಗುಲಿದೆ ಹಾಗೂ ಈಕೆಯ ಸಂಪರ್ಕಕ್ಕೆ ಬಂದಿರುವವರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

error: