April 13, 2024

Bhavana Tv

Its Your Channel

ನೃತ್ಯ ಸಂಗೀತ ಅಕಾಡೆಮಿಯ ಶಿಷ್ಯವೇತನಕ್ಕೆ ಆಯ್ಕೆಯಾದ ಕು.ಪಲ್ಲವಿ

ಕುಮಟಾ ; ಕರ್ನಾಟಕ ಸರಕಾರದ ನೃತ್ಯ ಸಂಗೀತ ಅಕಾಡೆಮಿ ಬೆಂಗಳೂರು ಇವರು ಧಾರವಾಡದಲ್ಲಿ ಜರುಗಿಸಿದ ಶಿಷ್ಯವೇತನದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಕು.ಪಲ್ಲವಿ ಗಾಯತ್ರಿ ಭರತನಾಟ್ಯ ವಿಭಾಗದಲ್ಲಿ ಶಿಷ್ಯವೇತನಕ್ಕೆ ಆಯ್ಕೆಯಾಗಿರುತ್ತಾಳೆ.
ಗೋಕರ್ಣ ಮೂಲದ ಕುಮಟಾದ ಶ್ರೀಮತಿ ಲಕ್ಮೀ ಮತ್ತು ಶ್ರೀ ಗೋಪಾಲ ಗಾಯತ್ರಿ ದಂಪತಿಗಳ ಮಗಳಾದ ಇವಳು ಪ್ರಥಮ ಬಿಎಸ್ಸಿ ಪದವಿ ಯಲ್ಲಿ ಓದುತ್ತಿದ್ದು ಭರತನಾಟ್ಯದಲ್ಲಿ ವಿದ್ವತ್ ಪಾಠವನ್ನು ಕಲಿಯುತ್ತಿದ್ದಾಳೆ. ನಾದಶ್ರೀ ಕಲಾಕೇಂದ್ರದಲ್ಲಿ ಶಿಕ್ಷಕಿ ವಿದೂಷಿ ನಯನಾ ಪ್ರಸನ್ನ ಇವರಲ್ಲಿ ಸತತ ೧೩ ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ಇವಳ ಈ ಸಾಧನೆಗೆ ಪಾಲಕರು,ಕುಮಟಾ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನೃತ್ಯ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

error: