March 18, 2025

Bhavana Tv

Its Your Channel

ಅಪಹರಣಕ್ಕೊಳಗಾದ ಮನೆ ಮಗನಿಗೆ ಅದ್ದೂರಿಯಾಗಿ ಸ್ವಾಗತ ಮಾಡಿದ ಕುಟುಂಬಸ್ಥರು

ಭಟ್ಕಳ: ಶನಿವಾರ ರಾತ್ರಿ ಅಪಹರಣಕ್ಕೊಳಗಾಗಿ ನಿನ್ನೆ ರಾತ್ರಿ ಗೋವಾದಲ್ಲಿ ಪತ್ತೆಯಾದ ಬಾಲಕನಿಗೆ ಇಂದು ಆತನ ಮನೆಯಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಿದರು.

ಆಗಸ್ಟ್ 20 ರಂದು ರಾತ್ರಿ ಅಂಗಡಿಗೆ ತೆರಳಿದ್ದ ಎಂಟು ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಒಟ್ಟು ನಾಲ್ವರು ಕಾರಿನಲ್ಲಿ ಬಂದು ಬಾಲಕನನ್ನು ಅಪಹರಿಸಿದ್ದರು. ಈ ಸಂಬAಧ ಭಟ್ಕಳ ನಗರ ಠಾಣೆಯಲ್ಲಿ ಮಧ್ಯರಾತ್ರಿ ಪ್ರಕರಣ ದಾಖಲಾಗಿತ್ತು. ಬಾಲಕನ ಹುಡುಕಾಟ ಹಾಗೂ ಆತನನ್ನು ಸುರಕ್ಷಿತವಾಗಿ ಕರೆತರಲು ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಗೋವಾದಲ್ಲಿ ಬಾಲಕನನ್ನು ಪೊಲೀಸರು ರಕ್ಷಣೆ ಮಾಡಿ ಭಟ್ಕಳಕ್ಕೆ ಕರೆತಂದು ಭಟ್ಕಳ ನಗರ ಠಾಣೆಯಲ್ಲಿ ಬಾಲಕನನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದರು. ಮನೆಯ ಮುದ್ದಿನ ಮಗನ ಆಗಮನದ ವಿಷಯ ತಿಳಿಯುತ್ತಿದ್ದಂತೆ ಸಂತೋಷಗೊAಡ ಕುಟುಂಬಸ್ಥರು ಮಗ ಮನೆಗೆ ಬರುತ್ತಿದಂತೆ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ.

error: