
ಭಟ್ಕಳ: ಅಗ್ನಿಪಥ ದೈಹಿಕ ಪರೀಕ್ಷೆಗೆಂದು ಹಾವೇರಿಗೆ ತೇರಳಿದ 56 ಯುವಕರಿಗೆ ಶಾಸಕ ಸುನೀಲ ನಾಯ್ಕ ವೈಯಕ್ತಿಕವಾಗಿ ಬಸ್ ವ್ಯವಸ್ಥೆ ಕಲ್ಪಿಸಿ ಖುದ್ದು ಸ್ಥಳದಲ್ಲಿ ನಿಂತು ಯುವಕರಿಗೆ ಶುಭ ಹಾರೈಸಿದರು.
ಶಿರಾಲಿಯ ಜನತಾ ವಿದ್ಯಾಲಯದ ಮುಂಭಾದಲ್ಲಿ ಯುವಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಹಾವೇರಿಗೆ ತೇರಳಲು ಸಿದ್ಧವಾದ ಯುವಕರಿಗೆ ಶಾಸಕ ಸುನೀಲ ನಾಯ್ಕ ಖುದ್ದು ಬಸ್ ಇರುವ ಸ್ಥಳಕ್ಕೆ ಬಂದು ಯುವಕರಿಗೆ ಶುಭ ಹಾರೈಸಿದರು. ಈ ವೇಳೆ ಶಾಸಕ ಸುನೀಲ ನಾಯ್ಕರಿಗೆ ಜಯಘೋಷ ಕೂಗಿದರು.
ಈ ವೇಳೆ ಮಾತನಾಡಿದ ಶಾಸಕ ಸುನೀಲ ನಾಯ್ಕ ದೇಶದ ಯುವಕರೆಲ್ಲ ದೇಶ ಸೇವೆ ಮಾಡಬೇಕೆಂಬ ನರೇಂದ್ರ ಮೋದಿಯವರ ಕನಸಂತೆ ಅಗ್ನಿಪಥ ಎನ್ನುವ ಯೋಜನೆ ಅಡಿಯಲ್ಲಿ ಭಟ್ಕಳ ಭಾಗದಿಂದ ಇಂದು 56 ಯುವಕರು ಹಾವೇರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಅವರೆಲ್ಲರಿಗೂ ಹೋಗಿ ಬರುವ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಂಡಿದ್ದೇನೆ ಹಾಗೂ ನನ್ನ ವಿಧಾನಸಭಾ ಕ್ಷೇತ್ರದಿಂದ ನಾಳೆ ಎಷ್ಟೇ ಯುವಕರು ಹೋಗುವವರಿದ್ದರು ಅವರಿಗೆ ನನ್ನ ಸಹಕಾರ ಇರಲಿದೆ ಎಂದ ಅವರು ಎಲ್ಲಾ ಯುವಕರು ಈ ಯೋಜನೆಯ ಉಪಯೋಗ ಪಡೆದುಕೊಂಡು ದೇಶ ಸೇವೆ ಮಾಡಿ ಎಂದು ಶುಭ ಹಾರೈಸಿದರು.
ಭಟ್ಕಳ ಶಾಸಕ ಸುನೀಲ ನಾಯ್ಕರ ಈ ನಡೆ ರಾಜ್ಯ ಹಾಗೂ ಜಿಲ್ಲೆಯ ಶಾಸಕರಿಗೆ ಪ್ರೇರಣೆಯಾಗಬೇಕಿದೆ.
ಈ ಸಂದರ್ಭದಲ್ಲಿ ಶಿರಾಲಿ ಜನತಾ ವಿದ್ಯಾಲಯದ ಪ್ರಾಂಶುಪಾಲರು ರಾಮರಥ, ಶಿರಾಲಿ ಪಂಚಾಯತ ಸದಸ್ಯರಾದ ವೆಂಕಟೇಶ ನಾಯ್ಕ, ಶಿರಾಲಿಯ ಮುಖಂಡ ಸಂದೀಪ ನಾಯ್ಕ ಹಾಗೂ ಪ್ರೀತಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ