ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ ನೂತನವಾಗಿ ಚುನಾಯಿತರಾದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ರು ಹಾಗೂ ನಿರ್ದೇಶಕರುಗಳಿಗೆ ಅಭಿನಂದನಾ ಸಮಾರಂಭ ನಡೆಯಿತು
ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿರುವ ಎಸ್ . ಎಮ್ .ಪಿ .ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಗುಂಡ್ಲುಪೇಟೆ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಚಾಮುಲ್ ಅಧ್ಯಕ್ಷರಾದ ವೈ. ಸಿ .ನಾಗೇಂದ್ರ ರವರು ದೀಪ ಬೆಳಗುವೆ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ನಮ್ಮ ಜಿಲ್ಲೆಗೆ ದಿವಂಗತ ಎಚ್ ಎಸ್ ಮಹದೇವ ಪ್ರಸಾದ್ ಅವರ ಕೊಡುಗೆ ಅಪಾರ ಮತ್ತು ಅವರ ಕನಸಿನ ಕೂಸಾಗಿದ್ದ ಚಾಮುಲ್ ಸಹಕಾರಿ ಹಾಲು ಒಕ್ಕೂಟದ ಕೀರ್ತಿ ಅವರಿಗೆ ಸಲ್ಲಬೇಕು ಹಾಗೆ ಉತ್ಪಾದಕರು ಗುಣಮಟ್ಟದ ಹಾಲನ್ನು ನೀಡಬೇಕು ಆಗಿದ್ದಲ್ಲಿ ಮಾತ್ರ ಒಕ್ಕೂಟ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.
ಚಾಮುಲ್ ನಿರ್ದೇಶಕರಾದ ಎಂಪಿ ಸುನಿಲ್ ಮಾತನಾಡಿ ಆಯ್ಕೆಯಾಗಲು ರಾಜಕೀಯ ಬೇಕು ನಂತರ ಅಭಿವೃದ್ಧಿ ಮಾಡಲು ರಾಜಕೀಯ ಬೇಡ ನೂತನವಾಗಿ ನಾವು ಬಂದಮೇಲೆ ಲೀಟರಗೆ ಒಂದು ರೂ ಹೆಚ್ಚುವರಿ ಮಾಡಿದ್ದೇವೆ. ಇನ್ನು ಮುಂದೆ ಹಂತಹAತವಾಗಿ ಹಾಲಿನ ದರವನ್ನು ಹೆಚ್ಚು ಮಾಡಬೇಕೆಂಬುದೇ ನಮ್ಮ ಗುರಿಯಾಗಿದೇ ಉತ್ಪಾದಕರು ಒಳ್ಳೆಯ ಗುಣಮಟ್ಟದ ಹಾಲನ್ನು ನೀಡಿದರೆ ನಮಗೆ ನಮ್ಮ ಒಕ್ಕೂಟದ ಎಲ್ಲರ ಸಹಕಾರವನ್ನು ತೆಗೆದು ದರವನ್ನು ಉತ್ಪಾದಕರಿಗೆ ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ,ಎಚ್ ಎಸ್ ನಂಜುAಡಸ್ವಾಮಿ, ಮಾದೇವಸ್ವಾಮಿ ,ಬಸವರಾಜು, ಶಾಹುಲ್ ಅಹಮದ್, ಶಿವಕುಮಾರ್, ರಾಜಶೇಖರ್, ಮೂರ್ತಿ ,ಸದಾಶಿವಮೂರ್ತಿ, ಶೀಲಾ ಪುಟ್ಟರಂಗಶೆಟ್ಟಿ, ಪ್ರಧಾನ ವ್ಯವಸ್ಥಾಪಕರಾದ ರಾಜಕುಮಾ ರ್, ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳನೌಕರರ ಸಂಘದ ಅಧ್ಯಕ್ಷರಾದ ಎಸ್ .ಶಿವ ನಾಗಪ್ಪ ಮಾಜಿ ಅಧ್ಯಕ್ಷರಾದ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷರಾದ ಮೃತ್ಯುಂಜಯ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರುಗಳು ಕಾರ್ಯದರ್ಶಿಗಳು ನೌಕರರ ಸಂಘದ ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳು ಮತ್ತು ಉತ್ಪಾದಕರು ಹಾಜರಿದ್ದರು
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ನಿವೃತ್ತಿ ಹೊಂದಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು,
ವರದಿ: ಸದಾನ0ದ ಕನ್ನೆಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.