May 14, 2024

Bhavana Tv

Its Your Channel

ಕಾಂಗ್ರೆಸ್ ಪಕ್ಷದಿಂದ ಭಾರತ್ ಜೋಡೋ ಪಾದಯಾತ್ರೆ ಪ್ರಯುಕ್ತ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ್ ಜೋಡೋ ಯಾತ್ರೆಗೆ ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ಕೇರಳದಿಂದ ಗುಂಡ್ಲುಪೇಟೆ ಮಾರ್ಗವಾಗಿ ಇದೇ ತಿಂಗಳ 30 ರಂದು ಕಾಲ್ನಡಿಗೆಯಲ್ಲಿ ಪಾದಯಾತ್ರೆಯ ಮೂಲಕ ಬರುತ್ತಿದ್ದಾರೆ. ಅದರ ಪ್ರಯುಕ್ತ ಸ್ಥಳ ಪರಿಶೀಲನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಂಡ್ಲುಪೇಟೆಗೆ ಆಗಮಿಸಿದ್ದೇನೆ. ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದರ ಉದ್ದೇಶ ಬಿಜೆಪಿ ಸರ್ಕಾರದ ದುರಾಡಳಿತವನ್ನೂ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸವನ್ನು ಮಾಡಲು ಭಾರತ್ ಜೋಡೋ ಪಾದಯಾತ್ರೆ ಚಿಂತನ ಮಂಥನವನ್ನು ಹಮ್ಮಿಕೊಂಡಿದೆ. ಬಿಜೆಪಿಯವರ ಆಡಳಿತದಲ್ಲಿ ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಜನರ ಮನಸ್ಸನ್ನು ಹೊಡೆಯುತ್ತಿದ್ದಾರೆ. ಧರ್ಮದ ರಾಜಕಾರಣವನ್ನ ಮಾಡುತ್ತಿದ್ದಾರೆ .ನರೇಂದ್ರ ಮೋದಿ ಬಂದ ಮೇಲೆ ಅಂತೂ ಅದು ಜಾಸ್ತಿಯಾಗಿದೆ. ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ .ಪ್ರಜಾಪ್ರಭುತ್ವ ಮತ್ತು ಸಂವಿಧಾನದಕ್ಕೇ ಧಕ್ಕೆ ಬರುತ್ತದೆ ಅದಕ್ಕೋಸ್ಕರ ಏಕತೆ ಮತ್ತು ಸಮಾನತೆ ಮತ್ತು ಶಾಂತಿ ನೆಲೆಸಬೇಕು. ರಾಷ್ಟ್ರಕವಿ ಕುವೆಂಪು ರವರು ಹೇಳಿರುವ ಹಾಗೆ ಸರ್ವ ಜನಾಂಗದ ಶಾಂತಿಯ ತೋಟ ವಾಗಿರಬೇಕು. ಅಲ್ಲದೆ ಯುವಕರ ಭವಿಷ್ಯ ಹಾಳಾಗುತ್ತಿದೆ .ಖಾಸಗೀಕರಣ ಜಾಸ್ತಿಯಾಗಿದೆ . ರೈತರಿಗೆ ವ್ಯವಸಾಯ ಮಾಡಲು ಖರ್ಚು ಜಾಸ್ತಿಯಾಗಿದೆ. ಅದರ ಅನುಗುಣವಾಗಿ ಕೇಂದ್ರ ಸರ್ಕಾರ ಹೆಚ್ಚು ಹಣವನ್ನು ಕೊಡಬೇಕು ಹಣ ಕೊಡುತ್ತಿಲ್ಲ ಇವೆಲ್ಲವುಗಳನ್ನು ಜನಸಾಮಾನ್ಯರಿಗೆ ತಿಳಿಸಲು ಭಾರತ ಜೋಡೋ ಕಾರ್ಯಕ್ರಮವನ್ನು ರಾಜಸ್ಥಾನದ ಉದಯಪುರದಲ್ಲಿ ಎ.ಐ.ಸಿ .ಸಿ ತೀರ್ಮಾನ ತೆಗೆದುಕೊಂಡಿದೆ ಆ ಮೂಲಕ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್ ಧ್ರುವನಾರಾಯಣ್, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾ ರ್,ಯುವ ಮುಖಂಡ ಎಚ್ ಎಮ್ ಗಣೇಶ್ ಪ್ರಸಾದ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ , ಜಿಲ್ಲಾ ಅಧ್ಯಕ್ಷರಾದ ಮರಿಸ್ವಾಮಿ, ಮಾಜಿ ಕಾಡ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ,ಬಿ. ರಾಜಶೇಖರ್, ಮಾಜಿ ಪುರಸಭಾ ಅಧ್ಯಕ್ಷರಾದ ಎಲ್ ಸುರೇಶ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಮುನಿರಾಜು, ಜಿಕೆ ಲೋಕೇಶ್, ಬಿ ಜಿ ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾ ದ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: