ಗುಂಡ್ಲುಪೇಟೆ. ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಯಂತೆ ಕರ್ನಾಟಕ ಕಾನೂನು ಆಯೋಗವು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ೨೦೨೨ ಮುಂಬರುವ ಅಧಿವೇಶನದಲ್ಲಿ ಸರ್ವಾನು ಮತದ ಸಮ್ಮತಿ ಸೂಚಿಸಿ ಅಂಗೀಕಾರ ಮಾಡುವಂತೆ ಒತ್ತಾಯಿಸಿ ಚಾಮರಾಜನಗರ ಕಸಾಪ ಜಿಲ್ಲಾಧ್ಯಕ್ಷ ಎಂ ಶೈಲಾ ಕುಮಾರ್ ಅವರು ಗುಂಡ್ಲುಪೇಟೆ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಮತ್ತು ಕೊಳ್ಳೇಗಾಲದ ಶಾಸಕರಾದ ಎನ್ ಮಹೇಶ್ ರವರನ್ನು ಭೇಟಿ ಮಾಡಿ ಪ್ರಾಸ್ತಾವಿಕ ವಿಧೇಯಕದ ಕರಡು ಪ್ರತಿಯ ಜೊತೆಗೆ ಮನವಿ ನೀಡಿ ಒತ್ತಾಯಿಸಿದರು.
ರಾಜ್ಯದಲ್ಲಿ ಅಧಿಕೃತ ಭಾಷೆಯ ವಿಚಾರವಾಗಿ ಕಾನೂನು ಚೌಕಟ್ಟಿನೊಳಗೆ ಒಂದು ವಿಧೇಯಕ ಜಾರಿ ಮಾಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ೨೦೨೨ ಅನ್ನು ಸಿದ್ಧಪಡಿಸಿ ಕರ್ನಾಟಕ ಕಾನೂನು ಆಯೋಗಕ್ಕೆ ಸಲ್ಲಿಸಿದ್ದು ಕಾನೂನು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್ . ಆರ್. ಬನ್ನೂರು ಮಠ ನೇತೃತ್ವದ ಸಮಿತಿಯು ಈ ವಿಧೇಯಕಕ್ಕೆ ಅವಶ್ಯವಿರುವ ಕಾನೂನುಗಳೊಂದಿಗೆ ಸಿದ್ಧಪಡಿಸಿ ವಿಧೇಯಕದ ಕರುಡನ್ನು ಕಾನೂನು ಸಚಿವರಿಗೆ ಸಲ್ಲಿಸಿರುತ್ತಾರೆ .ಅದನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಿದ ಸಂದರ್ಭದಲ್ಲಿ ಸದನದ ಸದಸ್ಯರೆಲ್ಲರೂ ಸರ್ವಾನುಮತಿಂದ ಸಮ್ಮತಿಸಿ ವಿಧೇಯಕವನ್ನು ಜಾರಿಗೆ ತರುವಂತೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದಾದ್ಯಂತ ಶಾಸಕರು ಹಾಗೂ ವಿಧಾನಪರಿಷತ್ತಿನ ಸದಸ್ಯರನ್ನು ಭೇಟಿಯಾಗಿ ಒತ್ತಾಯಿಸುತ್ತಿದೆ ಸದನದಲ್ಲಿ ಈ ವಿಧೇಯಕ ಅಂಗೀಕಾರಕ್ಕೆ ಸಹಮತ ವ್ಯಕ್ತಪಡಿಸುವಂತೆ ಶಾಸಕ ಸಿ ಎಸ್ ನಿರಂಜನ್ ಕುಮಾರ್ ಮತ್ತು ಎನ್ ಮಹೇಶ್ ರವರಲ್ಲಿ ಮನವಿ ಮಾಡಿದರು ಮನವಿ ಸ್ವೀಕರಿಸಿ ಸಹಮತ ವ್ಯಕ್ತಪಡಿಸಿದ ಶಾಸಕರುಗಳು ಈ ವಿಧೇಯಕದ ಕರಡು ಪ್ರತಿಯನ್ನು ಪರಿಶೀಲಿಸಿ ಸದನದಲ್ಲಿ ಬೆಂಬಲಿಸುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಕ ಸಾ ಪ ಜಿಲಾಧ್ಯಕ್ಷರಾದ ಎಮ್. ಶೈಲಾ ಕುಮಾರ್ ತಾಲೂಕು ಕಸಾಪಅಧ್ಯಕ್ಷರಾದ ಜಯಪ್ರಕಾಶ್, ಕಸಾಪ ದ ಪದಾಧಿಕಾರಿಗಳು ಹಾಜರಿದ್ದರು
ವರದಿ:ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.