ಭಟ್ಕಳ: ಮಳೆಗಾಲ ಆರಂಭವಾದ ಬಳಿಕ ಐ. ಆರ್.ಬಿ ಕಂಪನಿ ನಡೆಸುವ ರಾಷ್ಟೀಯ ಹೆದ್ದಾರಿ ಕಾಮಗಾರಿಯಿಂದ ಉದ್ಬವಿಸಬಹುದಾದ ಸಮಸ್ಯೆಗಳನ್ನು ಈಗಲೇ ಬಗೆಹರಿಸುವಂತೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಯ್ಕ ಅಧಿಕಾರಿಗಳಿಗೆ ಮತ್ತು ಕಂಪನಿಯವರಿಗೆ ಈ ಹಿಂದಿನ ಸಭೆಯಲ್ಲಿ ಸೂಚಿಸಿದ್ದರು. ಇನ್ನು ಒಂದು ತಿಂಗಳೊಳಗೆ ಮಳೆಗಾಲ ಆರಂಭವಾಗುವದರಿoದ ಗುರುವಾರ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಅವೈಜ್ಞಾನಿಕವಾಗಿ ಈ ಹಿಂದೆ ನಡೆದ ಕಾಮಗಾರಿಯಿಂದ ಕಳೆದ ಮಳೆಗಾಲದಲ್ಲಿ ಶಿರಾಲಿಯ ಜನತಾ ವಿದ್ಯಾಲಯದ ಸುತ್ತ ಮುತ್ತ ಸಂಪೂರ್ಣ ರಸ್ತೆ, ಹಿತ್ತಲುಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದ್ದಲ್ಲದೆ ಜನರು ಸಂಕಷ್ಟಕ್ಕೀಡಾಗಿದ್ದರು. ಆದರೆ ಈ ಬಾರಿ ಈ ಸಮಸ್ಯೆ ಮತ್ತೆ ಸಂಭವಿಸಬಾರದು. ಅಲ್ಲದೇ ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಐ ಆರ್ ಬಿ ಅಭಿಯಂತರರನ್ನು ಹಾಗೂ ಭಟ್ಕಳ ಸಹಾಯಕ ಆಯುಕ್ತರನ್ನು ಮತ್ತು ತಹಶೀಲ್ದಾರರನ್ನು ಸ್ಥಳಕ್ಕೆ ಕರೆಯಿಸಿ ಊರಿನ ನಾಗರಿಕರ ಸಮ್ಮುಖದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಯಾವ ರೀತಿ ಮಾಡಬಹುದು ಎಂದು ಚರ್ಚಿಸಲಾಯಿತು. ಈ ಬಗ್ಗೆ ಅಂತಿಮವಾಗಿ ಯಾವ ರೀತಿಯಾಗಿ ಕಾಮಗಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡಲಾಗಿತು. ಅದರಂತೆ ಸಮಸ್ಯೆ ಆಗುವ ಜಾಗಗಳನ್ನು ಅಧಿಕಾರಿಗಳಿಗೆ ತೋರಿಸಿ, ಮಳೆಗಾಲ ಪ್ರಾರಂಭವಾಗುವ ಮುನ್ನ ಸಮಸ್ಯೆ ಬಗೆಹರಿಸುವಂತೆ ಐ ಆರ್ ಬಿ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.
ಒಟ್ಟಿನಲ್ಲಿ ಕಳೆದ ಮಳೆಗಾಲದಲ್ಲಿ ಉದ್ಬವಿಸಿದ ಸಮಸ್ಯೆ ಈ ಬಾರಿ ಉದ್ಬವಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.