September 14, 2024

Bhavana Tv

Its Your Channel

ಮಧ್ಯಾಹ್ನದ ಬುಲೆಟಿನ್ ಉತ್ತರಕನ್ನಡಕ್ಕೆ ನಿರಾಳ: ಸಂಜೆಯ ವರದಿಯತ್ತ ಎಲ್ಲರ ಚಿತ್ತ.

ಉತ್ತರಕನ್ನಡ : ಆರೊಗ್ಯ ಇಲಾಖೆಯ ಪ್ರತಿನಿತ್ಯ ಎರಡು ಬಾರಿ ಕರೋನಾ ಹೊಸ ಪ್ರಕರಣ ಹಾಗೂ ಸದ್ಯ ಚಿಕಿತ್ಸೆ ಪಡೆಯುವ ಸೊಂಕಿತರವರದಿ ಬಗ್ಗೆ ಮಾಹಿತಿ ನೀಡುತ್ತಿದ್ದು ಗುರುವಾರ ಮಧ್ಯಾಹ್ನದ ವರದಿ ರಾಜ್ಯದಲ್ಲಿ ಹೊಸದಾಗಿ ೨೨ ಪ್ರಕರಣ ಪತ್ತೆಯಾಗಿದೆ.
ಮಂಡ್ಯದ ಕೆ.ಆರ್.ಪೇಟೆ ಹೊಸದಾಗಿ ೪ ಬೆಂಗಳೂರು ನಗರ ೫, ಗದಗ ೪ ಬೀದರ್ ೪ ದಾವಣಗೆರೆ ೩ ಹಾಗೂ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಂದು ಜಿಲ್ಲೆಯಲ್ಲಿ ಹೊಸ ಪ್ರಕರಣ ಬೆಳಕಿಗೆ ಬರಬಹುದು ಆತಂಕ ಮಧ್ಯಾಹ್ನದ ಬುಲೆಟಿನ್‌ಬಂದ ಬಳಿಕ ನಿರಾಳವಾಗಿದ್ದು ಸಂಜೆಯವರದಿಯತ್ತ ಎಲ್ಲರ ಚಿತ್ತ ಎನ್ನುವಂತಿದೆ. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕಿನಿಂದ ಗಂಟಲು ದ್ರವ ತಪಾಸಣೆ ಹೋಗಿದ್ದು ವರದಿಗಾಗಿ ಕಾಯುತ್ತಿದ್ದು ನೆರೆಯ ಮಹಾರಾಷ್ಟದಿಂದ ಬರುವವರು ಹೆಚ್ಚಿನ ಆತಂಕ ಮೂಡಿಸುತ್ತಿದ್ದು ಎಲ್ಲರ ಮೇಲೆ ಇಲಾಖೆ ನಿಗಾವಹಿಸುತ್ತಿದೆ.

error: