ಹೊನ್ನಾವರ: ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಖಾಜಿಮನೆಯ ಅರಣ್ಯ ಪ್ರದೇಶದಲ್ಲಿರುವ ನಾಗಬನದ ಪಕ್ಕದಲ್ಲಿ ತೆಂಗಿನ ಗರಿಗಳಿಂದ ಮರೆಮಾಚಿಟ್ಟಿದ್ದ ೨೦ಲೀ. ಸಾಮರ್ಥ್ಯದ ೦೪ ಪ್ಲಾಸ್ಟೀಕ್ ಕೊಡಗಳಲ್ಲಿ ೮೦ಲೀ.ದಷ್ಟು ಕಳ್ಳಭಟ್ಟಿಯ ಬೆಲ್ಲದ ಕೊಳೆ ಹಾಗೂ ೩೫ಲೀ.ದಷ್ಟು ಕಳ್ಳಭಟ್ಟಿಯ ಬೆಲ್ಲದ ಕೊಳೆ, ಒಟ್ಟೂ ೧೧೫ಲೀ. ಕಳ್ಳಭಟ್ಟಿಯ ಬೆಲ್ಲದ ಕೊಳೆಯನ್ನು ಕಳ್ಳಭಟ್ಟಿ ಸರಾಯಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಉಪ ವಿಭಾಗ ಹೊನ್ನಾವರ ಅಬಕಾರಿ ಉಪ ಅಧೀಕ್ಷಕರಾದ ಸಂತೋಷ ಕುಡಾಳಕರ್, ರವರ ನೇತೃತ್ವದಲ್ಲಿ, ಅಬಕಾರಿ ನಿರೀಕ್ಷಕರಾದ ದಾಮೋದರ್ ಎನ್ ನಾಯ್ಕ,ಅಬಕಾರಿ ಉಪ ನಿರೀಕ್ಷಕರಾದ ಪುಷ್ಪಾ ಗದಾಡಿ, ಗಂಗಾಧರ್ ಯು ಅಂತರಗಟ್ಟಿ, ಅಬಕಾರಿ ರಕ್ಷಕರುಗಳಾದ ಹಾಲಸಿದ್ದಪ್ಪ ಕುರಿಹುಲಿ, ಮುತ್ತೇಪ್ಪ ಬುಗಡಿಕಟ್ಟಿ, ವಿಕ್ರಮ್ ಬೀಡಿಕರ್, ರಮೇಶ್ ರಾಠೋಡ್ ಹಾಗೂ ವಾಹನ ಚಾಲಕರಾದ ಸಿದ್ರಾಮಪ್ಪ ಹೊಳೆಪ್ಪಗೋಳ ಹಾಜರಿದ್ದರು.
.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.