ಕಾರವಾರ: ದಿನದಿಂದ ದಿನಕ್ಕೆ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಲ್ಲಿದ್ದು ಉತ್ತರಕನ್ನಡದಲ್ಲಿ ಇಂದು ಸಂಜೆಯ ಹೆಲ್ತ ಬುಲೆಟಿನ್ ಪ್ರಕಾರ ಸೊಂಕಿತರ ಸಂಖ್ಯೆ ೪೨ಕ್ಕೆ ಏರಿಕೆಯಾಗಿದೆ. ೪೦ವರ್ಷದ ಕಾರವಾರ ಮೂಲದ ವ್ಯಕ್ತಿ ಕಳೆದ ಮೂರು ದಿನದ ಹಿಂದೆ ದುಬೈನಿಂದ ಮಂಗಳುರು ವಿಮನ ನಿಲ್ದಾಣಕ್ಕೆ ಆಗಮಿಸಿದ್ದರು. ಇವರನ್ನು ಅಲ್ಲಿಯೇ ಕ್ವಾರಂಟೈನನಲ್ಲಿ ಇಡಿಸಿದ್ದು ಇಂದಿನ ಹೆಲ್ತ ಬುಲಕೆಟಿನ್ ಬಳಿಕ ಸೊಂಕು ದೃಡವಾಗಿದೆ. ರಾಜ್ಯದಲ್ಲ ಇಂದು ಮಹಾಮಾರಿ ಕೊರೋನಾ ವೈರಸ್ ಗೆ ಬೀದರ್ ನಲ್ಲಿ ಮತ್ತೊಂದು ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ ೩೬ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿತರ ಸಂಖ್ಯೆಯೂ ಶುಕ್ರವಾರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಂದೇ ದಿನವೇ ಬರೋಬ್ಬರಿ ೬೯ ಮಂದಿಗೆ ಪಾಸಿಟಿವ್ ದೃಢುಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೧೦೫೬ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ೧೩, ಮಂಡ್ಯದಲ್ಲಿ ೧೩ ಸೇರಿದಂತೆ ರಾಜ್ಯದಲ್ಲಿ ಒಟ್ಟು ೬೯ ಹೊಸ ಕೊವಿಡ್-೧೯ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡ ೧೫. ಬೆಂಗಳೂರು ನಗರದಲ್ಲಿ ೧೩, ಮಂಡ್ಯದಲ್ಲಿ ೧೩, ಬೀದರ್ ನಲ್ಲಿ ೫, ಕೋಲಾರದಲ್ಲಿ ೧, ಉತ್ತರಕನ್ನಡ ೧ ಚಿತ್ರದುರ್ಗದಲ್ಲಿ ೨, ಶಿವಮೊಗ್ಗದಲ್ಲಿ ೧, ಹಾಸನದಲ್ಲಿ ೩, ಬಾಗಲಕೋಟೆಯಲ್ಲಿ ೧, ಉಡುಪಿಯಲ್ಲಿ ೫ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಬೈನಿಂದ ಮರಳಿರುವ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಚಿತ್ರದುರ್ಗ, ಶಿವಮೊಗ್ಗ, ಹಾಸನದಲ್ಲಿ ಮುಂಬೈನಿ0ದ ಮರಳಿದ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಕೋಲಾರ ಮತ್ತು ಚಿತ್ರದುರ್ಗದಲ್ಲಿ ಚೆನ್ನೈನಿಂದ ಮರಳಿದ ಹಾಗೂ ಉಡುಪಿಗೆ ದುಬೈನಿಂದ ಮರಳಿದ ವ್ಯಕ್ತಿಗಳಲ್ಲಿ ಸೋಂಕು ಕಂಡುಬ0ದಿದೆ. ಇತರ ಜಿಲ್ಲೆಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದರಲ್ಲಿ ಕೂಡ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ೫೨೦ ಪ್ರಕರಣಗಳು ಸಕ್ರಿಯವಾಗಿದ್ದು, ೪೭೬ ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ ೩೬ ಜನರು ಸೋಂಕಿನಿ0ದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯು ಅಧಿಕೃತ ಮಾಹಿತಿ ನೀಡಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.