December 21, 2024

Bhavana Tv

Its Your Channel

ರಾಜ್ಯದಲ್ಲಿ ಇಂದು ಒಂದೇ ದಿನ 23 ಹೊಸ ಪ್ರಕರಣ ಪತ್ತೆ,ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 23 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ ಆಗಿದೆ. ಈ ಪೈಕಿ 548 ಸಕ್ರಿಯ ಸೋಂಕು ಪ್ರಕರಣಗಳಾಗಿದ್ದು, 494 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ 14, ಹಾಸನ 3, ಬಳ್ಳಾರಿ 1, ಧಾರವಾಡ 1, ಉಡುಪಿ 1, ಮಂಡ್ಯ 1, ಬಳ್ಳಾರಿ 1, ಬಾಗಲಕೋಟೆ 1 ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ 1056 ಪ್ರಕರಣಗಳಿದ್ದವು ಇಂದು 1079ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ 202 ಪ್ರಕರಣಗಳಿದ್ದು ಅದು 216ಕ್ಕೆ ಹೆಚ್ಚಳವಾಗಿದೆ.ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಗೆ ಇನ್ನಷ್ಟು ಭೀತಿ ಹೆಚ್ಚಾಗಿದೆ. ಇನ್ನು ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಿಬಿಟ್ಟರೆ ಸಮುದಾಯಕ್ಕೆ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಶುಕ್ರವಾರ ಒಟ್ಟು 63 ಸೋಂಕಿತ ಪ್ರಕರಣಗಳು ಕಂಡಬಂದಿದ್ದವು. ಈಗಾಗಲೇ ಶನಿವಾರ ಬೆಳಗ್ಗೆಯೇ 23 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕೊರೊನಾದಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 494ಕ್ಕೇರಿದೆ.

source: News Hunt

error: