ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸ 45 ಕೋವಿಡ್-19 ಪ್ರಕರಣಗಳು ದೃಢವಾಗಿದ್ದು ಕೋವಿಡ್-19 ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ದುಬೈ ವಿಮಾನದ ಮೂಲಕ ಬಂದಿದ್ದ 20 ಜನರಿಗೆ ಕೋವಿಡ್-19 ಸೋಂಕು ತಾಗಿದ್ದು, ಮಂಗಳೂರು ಮತ್ತು ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16, ಬೆಂಗಳೂರು ನಗರದಲ್ಲಿ 13 ಪ್ರಕರಣ, ಉಡುಪಿಯಲ್ಲಿ ಐದು, ಬೀದರ್ ನಲ್ಲಿ ಮೂರು, ಹಾಸನದಲ್ಲಿ ಮೂರು, ಚಿತ್ರದುರ್ಗ ಎರಡು, ಶಿವಮೊಗ್ಗ, ಕೋಲಾರ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿದೆ.ಕೋಲಾರ (1) ಮತ್ತು ಚಿತ್ರದುರ್ಗ(2) ಕ್ಕೆ ಚೆನ್ನೈ ನಿಂದ ಬಂದವರಿಗೆ ಸೋಂಕು ಇರುವುದು ದೃಢವಾಗಿದೆ. ಹಾಸನ(3) ಮತ್ತು ಶಿವಮೊಗ್ಗ (1) ಮುಂಬೈನಿಂದ ಬಂದವರಿಗೆ ಸೋಂಕು ದೃಢವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 16 ಸೋಂಕಿತರ ಪೈಕಿ 15 ಮಂದಿ ದುಬೈ ನಿಂದ ಬಂದವರಾಗಿದ್ದರೆ ಓರ್ವ ಮಹಿಳೆ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಉಡುಪಿಯಲ್ಲಿ ದುಬೈನಿಂದ ಬಂದ ಐವರಿಗೆ ಸೋಂಕು ದೃಢವಾಗಿದೆ. ಬೆಂಗಳೂರು ನಗರದಲ್ಲಿ ಇಬ್ಬರಿಗೆ ಸೋಂಕಿತ ಸಂಖ್ಯೆ 911ರ ಸಂಪರ್ಕದಿಂದ ಮತ್ತು ಉಳಿದ 11 ಮಂದಿಗೆ ಸೋಂಕಿತ ಸಂಖ್ಯೆ 653ರ ದ್ವಿತೀಯ ಸಂಪರ್ಕದಿಂ ಸೋಂಕು ತಾಗಿದೆ. ರಾಜ್ಯದಲ್ಲಿ ಇಂದು 45 ಸೋಂಕು ಪ್ರಕರಣ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1032ಕ್ಕೆ ಏರಿದೆ. ಇದರಲ್ಲಿ 520 ಪ್ರಕರಣಗಳು ಆಕ್ಟಿವ್ ಇದ್ದು, 35 ಜನರು ಮೃತಪಟ್ಟಿದ್ದಾರೆ. 476 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಕೋವಿಡ್ ಅಲ್ಲದ ಕಾರಣದಿಂದ ಮೃತಪಟ್ಟಿದ್ದಾನೆ.
source: News Hunt
More Stories
ಸಾಹಿತಿ ಶಿಕ್ಷಕಿ ಜಯಶ್ರೀ ರಾಜು ರವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಭಾಜನ
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್:ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್ಗೌಡ, ಬೆಂಗಳೂರು, ನೇಮಕ