December 21, 2024

Bhavana Tv

Its Your Channel

ಅಧ್ಯಕ್ಷರಾಗಿ ರಮೇಶ ನಾರಾಯಣ ನಾಯ್ಕ ಬಾಳೇಕೈ ಆಯ್ಕೆ.

ಸಿದ್ಧಾಪುರ:- ಶ್ರೀ ಚೌಡೇಶ್ವರಿ ಮತ್ತು ನಾಗ ಮತ್ತು ಪರಿವಾರ ದೇವತೆಗಳ ಸನ್ನಿಧಿ ಹಂಗಾರಖAಡ ಸಿದ್ಧಾಪುರದ “ಸಮಿತಿಯ, ನೂತನ ಅಧ್ಯಕ್ಷರು,ಉಪಾಧ್ಯಕ್ಷರು,ಕೋಶಾಧ್ಯಕ್ಷರು,ಕಾರ್ಯದರ್ಶಿ, ಕಜಾಂಚಿಗಳ ಆಯ್ಕೆಯನ್ನು ಮಾಡಲಾಯಿತು.

ಅಧ್ಯಕ್ಷರಾಗಿ- ರಮೇಶ ಎನ್ ನಾಯ್ಕ ಬಾಳೇಕೈ, ಕಾರ್ಯದರ್ಶಿಗಳು – ಅಣ್ಣಪ್ಪ ಗಣಪ ನಾಯ್ಕ, ಉಪಾಧ್ಯಕ್ಷರಾಗಿ-ಕು/ಪ್ರವೀಣ ಜಿ ನಾಯ್ಕ,ಕೋಶಾಧ್ಯಕ್ಷರಾಗಿ- ನಟರಾಜ ಎಮ್ ಹೆಗಡೆ,ಕಜಾಂಚಿಯಾಗಿ-ಶ್ರೀ ಹರೀಶ ಆರ್ ನಾಯ್ಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ರಮೇಶ ಎನ್ ನಾಯ್ಕ ಅವರು ಮೊದಲು ಸಮಿತಿಯ ಕಾರ್ಯದರ್ಶಿಯಾಗಿ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಕೆಲಸ ಮಾಡಿದ ಅನುಭವ, ಹಾಗೂ ಶ್ರೀಯುತ ಉಪೇಂದ್ರ ಪೈ ಸೇವಾ ಟ್ರಸ್ಟ್ ನ ಸದಸ್ಯರೂ ಆಗಿದ್ದಾರೆ.ಫೆಬ್ರವರಿ 12 2023 ಭಾನುವಾರ ಶ್ರೀ ಚೌಡೇಶ್ವರಿ,ನಾಗ ಮತ್ತು ಪರಿವಾರ ದೇವತೆಗಳ 6 ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮವು ವೇ/ಮೂ/ ಶ್ರೀಯುತ ವಿನಾಯಕ ಸು ಭಟ್ಟ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದ್ದು ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳನ್ನು ಘನ ಅಧ್ಯಕ್ಷರಾದ ರಮೇಶ ನಾರಾಯಣ ನಾಯ್ಕ ಅವರು ಸಮಿತಿಯ ಸಭೆಯನ್ನು ಕರೆದು ತೀರ್ಮಾನಿಸಲಿದ್ದಾರೆಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: