December 22, 2024

Bhavana Tv

Its Your Channel

ಕಾಮಾಕ್ಷಿ ಪೆಟ್ರೂಲ್ ಬಂಕ್ ಮಾಲಿಕರಿಂದ ಆಟೋ ಯೂನಿಯನ್‌ಗೆ ೨೫ ಸಾವಿರ ಧನಸಹಾಯ.

ಭಟ್ಕಳ; ತಾಲೂಕಿನ ಕಾಮಾಕ್ಷಿ ಪೆಟ್ರೂಲ್ ಬಂಕ್ ವತಿಯಿಂದ ಸಂಕಷ್ಟದಲ್ಲಿರುವ ಆಟೋ ಯೂನಿಯನ್‌ಗೆ ೨೫ ಸಾವಿರ ನಗದು ರೂಪದಲ್ಲಿ ಸಹಾಯ ಮಾಡುವ ಮೂಲಕ ನೆರವಾದರು.


ಪೆಟ್ರೋಲ್ ಬಂಕ್ ಆವರಣದಲ್ಲಿ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ ಅವರಿಗೆ ೨೫ಸಾವಿರ ರೂ ನಗದು ಹಸ್ತಾಂತರಿಸಿದರು. ನಂತರ ಮಾಲೀಕ ನಾಗೇಶ ಭಟ್ ಮಾತನಾಡಿ ಕಳೆದ ೬೦ ದಿನಗಳಿಂದ ಅಟೊ ಚಾಲಕರು ದುಡಿಮೆ ಇಲ್ಲದೆ ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದು ಆದಷ್ಟು ಬೇಗ ಈ ಮಹಾಮಾರಿ ಅಟ್ಟಹಾಸ ಕೊನೆಗೊಳ್ಳಲಿ ಎಂದರು ದಿನದ ದುಡಿಮೆಯ ಅಟೋ ಚಾಲಕರಿಗೆ ಆಧಾರವಾಗಿತ್ತು. ಅಂತಹುದರಲ್ಲಿ ೬೦ದಿನಗಳಿಂದ ಸಾವಿರಾರು ಅಟೋ ಚಾಲಕರು ದುಡಿಮೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಡು ಬಡವರಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎಂದು ಕಾಮಾಕ್ಷಿ ಅಟೋ ಸರ್ವಿಸ್ ಎಂದು ಇದರ ಮೂಲಕ ನಗದನ್ನು ನೀಡಲಾಗಿದೆ. ಗ್ರಾಮ ದೇವರ ಕೃಪೆಯಿಂದ ಕರೊನಾ ಅಟ್ಟಹಾಸ ಕೊನೆಗೊಂಡು ಮೊದಲಿನಂತಾಗಲಿ ಎಂದು ಅವರು ಈ ಸಂದರ್ಬದಲ್ಲಿ ಪ್ರಾರ್ಥಿಸಿದರು. ಈ ಸಂದರ್ಬದಲ್ಲಿ ಪೆಟ್ರೋಲ್ ಬಂಕನ ನರಸಿಂಹ ಪ್ರಭು, ಸತೀಶ ನಾಯ್ಕ, ಹರಿದಾಸ ಮಡಿವಾಳ, ಶಿವಶಂಕರ, ಮಂಜುನಾಥ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ, ಪ್ರ.ಕಾ ಪ್ರವೀಣ ನಾಯ್ಕ, ಉಪಾಧ್ಯಕ್ಷ ಲಚ್ಮಯ್ಯ ನಾಯ್ಕ, ಖಜಾಂಚಿ ಪರಮೇಶ್ವರ ನಾಯ್ಕ, ಪಾಂಡು ನಾಯ್ಕ ಸೇರಿ ಇತರರು ಇದ್ದರು.

error: