ಉತ್ತರಕನ್ನಡ; ಜಿಲ್ಲೆಯಲ್ಲಿ ಕರೋನಾ ಸೊಂಕು ಅಬ್ಬರವಿದ್ದು ಬೆಳಗಿನ ವರದಿಯಲ್ಲಿ ಹೊಸದಾಗಿ ನಾಲ್ಕು ಪ್ರಕರಣ ದಾಖಲಾಗಿದೆ. ಜೊಯ್ಡಾಕ್ಕೆ ತಮಿಳುನಾಡಿನಿಂದ ವಾಪಸ್ಸಾಗಿದ್ದ ೩೧ ವರ್ಷದ ಮಹಿಳೆ, ಹಾಗೂ ದಾಂಡೇಲಿಗೆ ಗುಜರಾತನಿಂದ ಬಂದಿದ್ದ ೨೯ ವರ್ಷದ ಯುವಕ, ಮಂಬೈನಿ0ದ ಯಲಾಪುರಕ್ಕೆ ಬಂದಿದ್ದ ೧೬ ವರ್ಷದ ಯುವತಿ, ಮುಂಬೈನಿ0ದ ಹೊನ್ನಾವರಕ್ಕೆ ಬಂದಿದ್ದ ೩೪ ವರ್ಷದ ಮಹಿಳೆಗೆ ಕರೊನಾ ಸೊಂಕು ಬೆಳಗಿನ ಹೆಲ್ತ ಬುಲೆಟಿನ್‌ನಲ್ಲಿ ದೃಡಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ೫೬ ಸೊಂಕಿತ ಪ್ರಕರಣ ಪತ್ತೆಯಾಗಿದ್ದು ಇದರಲ್ಲಿ ೪೫ ಸಕ್ರಿಯ ಪ್ರಕರಣವಿದೆ. ಭಟ್ಕಳ ನಂತರ ಜಿಲ್ಲೆಯಲ್ಲಿ ಹೊನ್ನಾವರ ತಾಲೂಕಿನಲ್ಲಿ ಅತಿ ಹೆಚ್ಚು ಕರೋನಾ ಸೊಂಕು ದೃಡವಾಗುತ್ತಿರುವುದು ಆತಂಕದ ವಿಷಯವಾಗಿದೆ. ಮುಂಬೈನಿ0ದ ಬಂದು ಸರ್ಕಾರಿ ಕ್ವಾರಂಟೈನನಲ್ಲಿರುವ ನಾಲ್ವರಿಗೆ ಸೊಂಕು ಪತ್ತೆ ಬಳಿಕ ಮಂಗಳವಾರ ಮತ್ತೊರ್ವರಲ್ಲಿ ದೃಡಪಟ್ಟಂತಾಗಿದ್ದು, ಇದರಿಂದ ತಾಲೂಕಿನ ೫ ಜನರಲ್ಲಿ ಕರೋನಾ ಸೊಂಕು ದೃಡವಾಗಿದೆ. ಅಲ್ಲದೇ ಹೊನ್ನಾವರ,ಕುಮುಟಾ ಕಾರವಾರ, ಮುಂಡಗೊಡನಲ್ಲಿ ಕರೋನಾ ಪ್ರಕರಣ ಈಗಾಗಲೇ ಪತ್ತೆಯಾಗಿದ್ದು, ಇಂದು ಜೊಯ್ಡಾ ದಾಂಡೇಲಿ ಯಲ್ಲಾಪುರಕ್ಕೆ ಹೊರರಾಜ್ಯದಿಂದ ಬಂದವರಿ0ದ ಕರೋನಾ ಸೊಂಕು ಬಂದಿರುವದರಿ0ದ ಹೊರ ರಾಜ್ಯವೇ ಜಿಲ್ಲೆಯ ಮಟ್ಟಿಗೆ ಆತಂಕ ಹುಟ್ಟಿಸಿದೆ
ಅಲ್ಲದೇ ಜಿಲ್ಲೆಯ ಇನ್ನುಳಿದ ತಾಲೂಕಿನಲ್ಲಿಯೂ ಈ ಸೊಂಕು ಪತ್ತೆಯಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ನಿನ್ನೆ ಒಂದೆ ದಿನ ಜಿಲ್ಲೆಯಲ್ಲಿ ೯ ಹೊಸ ಪ್ರಕರಣ ಹಾಗೂ ರಾಜ್ಯದಲ್ಲಿ ೧೦೯ ಪ್ರಕರಣ ದಾಖಲಾಗಿತ್ತು. ನಾಲ್ಕನೇ ಹಂತದ ಪ್ರಥಮ ದಿನ ಈ ಹಿಂದಿನ ಎಲ್ಲಾ ದಾಖಲೆ ಮುರಿದು ಹೆಚ್ಚಿನ ಪ್ರಕರಣ ಒಂದೇ ದಿನ ಪತ್ತೆಯಾಗಿತ್ತು.
ಇಂದು ಮಧ್ಯಾಹ್ನ ವರದಿಯಲ್ಲಿ ಹೊಸದಾಗಿ ೧೨೭ ಮಂದಿಗೆ ಕರೋನಾ ದೃಡಪಟ್ಟಿದ್ದು ೧೩೭೩ ಒಟ್ಟು ಪ್ರಕರಣ ರಾಜ್ಯದಲ್ಲಿ ಇದುವರೆಗು ವರದಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇಂದು ಒಂದೇ ದಿನ ೫೧ ಹೊಸ ಪ್ರಕರಣ ಪತ್ತೆಯಾಗಿದೆ.
More Stories
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ