ಹೊನ್ನಾವರ; ತಾಲೂಕಿನ ಮಾವಿನಕುರ್ವಾ ಸಮಾನ ಮನಸ್ಕರ ಪೀಟರ್ ಮೇಂಡೊನ್ಸಾ ಅವರ ಸಹಭಾಗಿತ್ವದಲ್ಲಿ ಮೈಕಲ್ ಪಿ.ಡಿಸೋಜಾ, ಕೆಇಬಿ ಗುತ್ತಿಗೆದಾರ ಹೆನ್ರಿ ಲೀಮಾ, ಎಡ್ವೀನ್ ಡಿಸೋಜಾ, ವಿ. ಸ್ಟಾರ್ ಗ್ರೂಪ್ ರೋಲಗಲ್ ಫರ್ನಾಡಿಂಸ್ ಕಾಸರಕೋಡದ ಜಾಕೊ ಮಟಾಜೋ, ದರ್ಶನ್ ಇಲ್ಟೆಟಿಕ್ ಗುತ್ತಿಗೆದಾರ ಭಾಗವತ ಸಹಾಯಹಸ್ತದೊಂದಿಗೆ ಗ್ರಾಮದ ಬಡಜನತೆಗೆ ಒಟ್ಟು ೫೦೦ ಕಿಟ್ ವಿತರಿಸಿದರು. ಅಲ್ಲದೆ ಗ್ರಾಮದಲ್ಲಿ ಹಗಲಿರುಳು ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಪೀಟರ್ ಮೇಂಡೊನ್ಸಾ ಮಾತನಾಡಿ ಈಗಾಗಲೇ ಗ್ರಾಮದ ೪೦೦ಕ್ಕೂ ಅಧಿಕ ಕಿಟ್ ನೀಡಲಾಗಿದೆ. ಬಡವರಿಂದ ಬಡವರಿಗಾಗಿ ಕಿಟ್ ನೀಡುವ ಉದ್ದೇಶದಿಮದ ಇಂದು ೫೦೦ ಕಿಟ್ ವಿತರಿಸುತ್ತೆವೆ. ಒಟ್ಟು ಗ್ರಾಮದಲ್ಲಿ ೯೦೦ ಕಿಟ್ ವಿತರಿಸಿದ್ದೇವೆ. ನಾವು ಕಿಟ್ ಕೊಡುತ್ತಿರುವುದು ಉಳಿದ ಗ್ರಾಮಕ್ಕೆ ಮಾದರಿಯಾಗಲಿಎಂದರು .
ಕೆಇಬಿ ಗುತ್ತಿಗೆದಾರ ಹೆನ್ರಿ ಲೀಮಾ ಮಾತನಾಡಿ ಕಷ್ಟದಲ್ಲಿರುವರಿಗೆ ಸಹಾಯ ಮಾಡುವುದು ಮನುಕುಲದ ಧರ್ಮ ಈ ದೃಷ್ಟಿಯಲ್ಲಿ ಇಂದು ನಿಮ್ಮ ಕಷ್ಟವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಲು ನಾವು ಈ ಕಿಟ್ ವಿತರಿಸುತ್ತಿದ್ದೇವೆ. ದ್ವೀಪದಂತಿರುವ ಪ್ರದೇಶವಾದಈ ಸ್ಥಳದಲ್ಲಿ ಬಡ ಕುಟುಂಬದ ಸಂಖ್ಯೆ ಜಾಸ್ತಿ ಇದೆ ಕೊರೊನಾ ಮಾರಣಾಂತಿಕ ಖಾಯಿಲೆ ದೂರವಾಗಬೇಕಾದರೆ ಜನರು ಜಾಗ್ರತಿ ಹೊಂದಬೇಕು. ಜನರ ಸಹಕಾರ ಅಗತ್ಯ, ಎಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾರಾಯಣ ಗೌಡ, ಮಾದೇವ ಗೌಡ, ರೋಲಗನ್ ಕಾಸರಕೋಡ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.