December 19, 2024

Bhavana Tv

Its Your Channel

ಫೆ.22 ಕ್ಕೆ “ನಾಣಿಕಟ್ಟಾ ಹಬ್ಬ”

ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದೊಂದಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಇವರ ಆಶ್ರಯದಲ್ಲಿ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ(ಶ್ರೀ ನಟರಾಜ ಎಮ್ ಹೆಗಡೆ &ಗೆಳೆಯರ ಬಳಗ)ದವರ ಸಮರ್ಥ ಸಂಯೋಜನೆಯಲ್ಲಿ,ಕಲಾ ಪೋಷಕರು,ಕಲಾಭಿಮಾನಿಗಳು,ಕಲಾ ಪ್ರೇಮಿಗಳ ಸಂಪೂರ್ಣ ಸಹಕಾರದೊಂದಿಗೆ,ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸವಿನೆನಪಿನಲ್ಲಿ, ನಾಣಿಕಟ್ಟಾದಲ್ಲಿ (ಸಿರಸಿ-ಸಿದ್ದಾಪುರ ಹೆದ್ದಾರಿ ಪಕ್ಕ )ಫೆಬ್ರವರಿ- 22-2023, ಬುಧವಾರ , ಮುಸ್ಸಂಜೆ 6-30 ಘಂಟೆಯಿAದ, “ನಾಣಿಕಟ್ಟಾ ಹಬ್ಬ” ಚಿಕ್ಕ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಸಭಾಕಾರ್ಯಕ್ರಮ,ಯಕ್ಷರಂಗದ ಸಾಧಕರಿಗೆ ಗೌರವ ಸಮರ್ಪಣೆ,ನಂತರ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾಮಕ್ಕಿ, ಹೊನ್ನಾವರ ಮತ್ತು ದಿಗ್ಗಜ ಅತಿಥಿ ಕಲಾವಿದರಿಂದ ಅದ್ಧೂರಿ ಪೌರಾಣಿಕ ಯಕ್ಷಗಾನ ಪ್ರದರ್ಶನ “ಭೀಷ್ಮ ವಿಜಯ” ನಡೆಯಲಿದೆ.

ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ-ಭೀಷ್ಮ, ವಿದ್ಯಾಧರ ಜಲವಳ್ಳಿ -ಸಾಲ್ವ, ಪ್ರದೀಪ ಸಾಮಗ-ಅಂಬೆ,ಅಶೋಕ ಭಟ್ಟ – ಪರಶುರಾಮ,ದೂತ-ಶ್ರೀದರ ಭಟ್ಟ ಕಾಸರಕೋಡ.

ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿ, ಕಲಾವಿದರನ್ನೂ, ಸಂಘಟಕರನ್ನೂ, ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.

error: