March 19, 2025

Bhavana Tv

Its Your Channel

ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸೆಂಟ್ರಲ್ ಸ್ಕೂಲ್

ಹೊನ್ನಾವರ:- ನ್ಯಾಶನಲ್ ಟೀಚರ್ಸ್ ಕೌನ್ಸಿಲ್ ಇದರ ವತಿಯಿಂದ ದಿನಾಂಕ 9-12-22 ರಂದು ನಡೆದ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಹೊನ್ನಾವರದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿದ್ದಾರೆ.
ಮೂರನೇತರಗತಿ ವಿದ್ಯಾರ್ಥಿ ಆರುಷ್ ಭಟ್ ರಾಷ್ಟç ಮಟ್ಟದಲ್ಲಿ 3ನೇ ಸ್ಥಾನವನ್ನು ಪಡೆದಿರುತ್ತಾನೆ. ಆರುಷ್ ಭಟ್ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರವನ್ನು ಗಳಿಸಿದ್ದಾನೆ. ಒಟ್ಟು 114 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು, ಇದರಲ್ಲಿ 5 ವಿದ್ಯಾರ್ಥಿಗಳು ಬೆಳ್ಳಿಪದಕ ಹಾಗೂ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ.ಎಲ್ಲಾ ವಿದ್ಯಾರ್ಥಿಗಳ ಈ ಸಾಧನೆಗೆ ಎಂ.ಪಿ.ಇ.ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಪ್ರಾಂಶುಪಾಲರು , ಎಲ್ಲಾಶಿಕ್ಷಕರು,ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರುಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

error: