December 22, 2024

Bhavana Tv

Its Your Channel

ಮಾ.2 ಕ್ಕೆ ಗುಂಡ್ಲುಪೇಟೆಗೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ

ಗುಂಡ್ಲುಪೇಟೆ. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ತಾಲೂಕು ಮಂಡಲ ಅಧ್ಯಕ್ಷರಾದ ದೊಡ್ಡಹುಂಡಿಜಗದೀಶ್ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಮಾರ್ಚ್1ರಂದು ಶ್ರೀ ಮಲೆ ಮಹಾದೇಶ್ವರ ಬೆಟ್ಟದಿಂದ ಆರಂಭವಾಗಿ ಗುಂಡ್ಲುಪೇಟೆಗೆ ಮಾರ್ಚ್ 2 ಕ್ಕೆ ಆಗಮಿಸಲಿದ್ದು . ಈ ಬಿಜೆಪಿ ವಿಜಯ ಸಂಕಲ್ಪಯಾತ್ರೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಘಟಾನುಗಟಿ ನಾಯಕರ ದಂಡು ಆಗಮಿಸುತ್ತಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಬಿಜೆಪಿಯರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ, ಅರಗ ಜ್ಞಾನೇಂದ್ರ, ನಳಿನ್ ಕುಮಾರ್ ಕಟೀಲ್, ವಿ ಶ್ರೀನಿವಾಸ್ ಪ್ರಸಾದ್, ಸೇರಿದಂತೆ ಇನ್ನಿತರ ನಾಯಕರುಗಳು ಬಿಎಸ್ ಯಡಿಯೂರಪ್ಪನವರಿಗೆ ಸಾಥ್ ಕೊಡಲಿದ್ದಾರೆ ಎಂದು ಬಿಜೆಪಿಯ ಉಪಾಧ್ಯಕ್ಷ ಹಿರಿ ಕಾಟಿ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು .

ಈ ಸಂದರ್ಭದಲ್ಲಿ,, ಬಿಜೆಪಿಯ ಮುಖಂಡರುಗಳಾದ ಕನ್ನೆಗಾಲ ಸ್ವಾಮಿ, ಶ್ರೀ ಮಹದೇವ ಪ್ರಸಾದ್, ಕಮರಹಳ್ಳಿ ರವಿ, ನವೀನ್ ಮೌರ್ಯ, ಬಸವೇಶ್, ಎಚ್ ಎಮ್ ನಂದೀಶ್, ಹಾಗೂ ಮಾಧ್ಯಮ ಸಂಚಾಲಕರಾದ ಮಂಜುನಾಥ್ ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: