May 1, 2024

Bhavana Tv

Its Your Channel

ತರಕಾರಿ ಕೋಸ್ ಬೆಲೆ ದರ ಇಳಿಕೆ ಖಂಡಿಸಿ, ಜೆಡಿಎಸ್ ಪಕ್ಷದ ವಕ್ತಾರರಾದ ರಾಜುಗೌಡರ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ

ಗುಂಡ್ಲುಪೇಟೆ ಪಟ್ಟಣದ ಐಬಿ ಸರ್ಕಲ್ ನಲ್ಲಿ ನಡೆದ ವಿನೂತನ ಪ್ರತಿಭಟನೆಯನ್ನು ಜೆಡಿಎಸ್ ಪಕ್ಷದ ವಕ್ತಾರರಾದ ರಾಜುಗೌಡರ ನೇತೃತ್ವದಲ್ಲಿ ನಡೆಸಿದರು. ರಸ್ತೆಯಲ್ಲಿ ಓಡಾಡುವ ವಾಹನ ಚಾಲಕರಿಗೆ ಉಚಿತವಾಗಿ ತರಕಾರಿ ಕೋಸ್ ದರ ಇಳಿಕೆಯನ್ನು ಖಂಡಿಸಿ ವಿನೂತನವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ನಂತರ ಮಾತನಾಡಿ ಬಿಜೆಪಿಯವರು ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿರುವ ರಾಜ್ಯ ಸರ್ಕಾರ ರೈತರ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ತೆರವುಗೊಳಿಸಿ 400 ರೂಪಾಯಿ ಇದ್ದ ಒಂದು ಚೀಲದ ಬೆಲೆ ಇದೀಗ 1600 ಆಗಿದೆ. ಆದರೆ ಬಡ ರೈತ ಬೆಳೆಯುವ ತರಕಾರಿ ಕೋಸ್ ಬೆಳೆಗೆ ಬೆಲೆ ಸಿಗುತ್ತಿಲ್ಲ ರೈತರು ತಾನು ಬೆಳೆದ ಫಸಲನ್ನು ಮಾರುಕಟ್ಟೆಗೆ ಹಾಕಲು ಬಾಡಿಗೆ ನೀಡಲು ಆಗದಂತಹ ದುಷ್ಟ ಪರಿಸ್ಥಿತಿಗೆ ಬಂದು ನಿಂತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಇದಕ್ಕೆ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಬೀದಿಗಿಳಿದು ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಮಾಧ್ಯಮದ ಮೂಲಕ ತಿಳಿಸಿದರು. ಈ ವಿನೂತನ ಪ್ರತಿಭಟನೆಯಲ್ಲಿ ಪ್ರಧಾನಮಂತ್ರಿಯವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಕೃಷಿ ಮಂತ್ರಿ ಅವರಿಗೆ ತರಕಾರಿ ಕೋಸ್ ಗಳನ್ನು ಬಾಕ್ಸ್ ಮೂಲಕ ಅವರ ಮನೆಗಳಿಗೆ ತಲುಪಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಕಾಂತರಾಜ್, ಜೆಡಿಎಸ್ ಮುಖಂಡ ಕಳ್ಳಿಪುರದ ಕುಮಾರ್, ವಿಜಯ್ ಕುಮಾರ್, ಯುವ ಮುಖಂಡ ಪ್ರವೀಣ್ ನಾಯಕ್, ಮಹೇಶ್, ಶಿವಕುಮಾರ್, ಸಿದ್ದರಾಜು, ನಂದಕುಮಾರ್, ಹಸಗೂ ಲಿ ಸುರೇಶ್, ಹಾಗೂ ರೈತ ಮುಖಂಡರುಗಳು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: