May 2, 2024

Bhavana Tv

Its Your Channel

ಶ್ರೀ ಕಾಡಬಸವೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಉದ್ಘಾಟನಾ ಕಾರ್ಯಕ್ರಮ

ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಡಬಸವೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ.ನಿರಂಜನ ಪ್ರಣವ ಸ್ವರೂಪಿ ಶ್ರೀ ಮಹಾಂತ ಸ್ವಾಮಿಗಳವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ವಸತಿ ಸಚಿವರಾದ ವಿ. ಸೋಮ್ಮಣ್ಣ ನವರು ಹಾಗೂ ವೀರಶೈವ ಮಠಾಧಿಪತಿಗಳು ಜೊತೆಗೂಡಿ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ ವೀರಶೈವ ಧರ್ಮ ಒಂದು ಸಾಮಾಜಿಕ ಮತ್ತು ದಾಸೋಹಕ್ಕೆ ದೊಡ್ಡ ಇತಿಹಾಸವನ್ನು ಬರೆದಿರುವುದು ಮತ್ತು ದೇವನೂರು ಮಠ ಒಂದು ಇತಿಹಾಸ ಉಳ್ಳಂತಹ ಮಠವಾಗಿದೆ ನಮಗೆ ಮತ್ತು ನಿಮಗೆಲ್ಲ ಆಧಾರ ಸ್ತಂಭವಾಗಿರುವ ಮಠಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ದೇವನೂರಿನ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಮಹಾಂತ ಸ್ವಾಮಿಗಳವರು ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠ ಸುಕ್ಷೇತ್ರ ದೇವನೂರು ಇವರ ದಿವ್ಯ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ಜರುಗಿದವು ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಗಳು ಜಗದ್ಗುರು ಶ್ರೀ ವೀರ ಸಿಂಹಾಸನ ಸಂಸ್ಥಾನ ಮಠ ಶ್ರೀ ಕ್ಷೇತ್ರ ಸುತ್ತೂರು ಶ್ರೀಗಳು ಕಾಡಬಸವೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಉದ್ಘಾಟನೆಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ನಿರಂಜನ ಪ್ರಣವ ಸ್ವರೂಪಿ ಶ್ರೀ ಮಹಾಂತ ಸ್ವಾಮಿಗಳು ಶ್ರೀ ಗುರು ಮಲ್ಲೇಶ್ವರ ಮಹಾ ಸಂಸ್ಥಾನ ದಾಸ ಮಠ ದೇವನೂರು, ಶ್ರೀ ಮುಮ್ಮಡಿ ನಿರ್ವಹಣ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ದೇಗುಲ ಮಠ ಕನಕಪುರ, ಶ್ರೀ ಸಿದ್ದ ಮಲ್ಲಪ್ಪ ಸ್ವಾಮಿಗಳು ವೀರ ಸಿಂಹಾಸನಶಿಲಾ ಮಠ ಸೋಮಹಳ್ಳಿ, ಶ್ರೀ ಚನ್ನಬಸವ ಸ್ವಾಮಿಗಳು ಸಿದ್ದ ಮಲ್ಲೇಶ್ವರ ವಿರಕ್ತಮಠ ಚಾಮರಾಜನಗರ, ಶ್ರೀ ಶಿವಲಿಂಗೇAದ್ರ ಸ್ವಾಮಿಗಳು ಅಡವಿಮಠಪಡುಗೂರು, ಶ್ರೀ ಬಸವರಾಜ ಸ್ವಾಮಿಗಳು ವಿರಕ್ತಮಠ ಕಾರಾಪುರ, ಶ್ರೀ ಇಮ್ಮಡಿ ಮುರುಗರಾಜೇಂದ್ರ ಸ್ವಾಮಿಗಳು ಮುರುಗರಾಜೇಂದ್ರ ಸಂಸ್ಥಾನ ಮಠ ಮರೆಯಾಲ, ಶ್ರೀ ಗಂಗಾಧರ ಸ್ವಾಮಿಗಳು ಶ್ರೀ ಕಬ್ಬಿನ ಕೊಲೆಶ್ವರ ಮಠ ಗೋಪಾಲಪುರ ಹಾಗೂ 40ಕ್ಕೂ ಹೆಚ್ಚು ಹರ ಗುರು ಚರಮೂರ್ತಿಗಳು ಆಶೀನರಿದ್ದರು.

ಕ್ಷೇತ್ರದ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್, ಯುವ ಮುಖಂಡ ಎಚ್ ಎಂ ಗಣೇಶ್ ಪ್ರಸಾದ್, ಚಾಮುಲ್ ನಿರ್ದೇಶಕರಾದ ಎಂಪಿ ಸುನಿಲ್, ಹಾಗೂ ಮುಖ್ಯ ಭಾಷಣಕಾರರಾಗಿ ನಾಡೋಜ ಶ್ರೀ ಎಸ್ ಷಡಕ್ಷರಿ ಅಂಕಣಕಾರರು ಅಧ್ಯಕ್ಷರು ರಮಣ ಶ್ರೀ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಚನ್ನಬಸವ ಸ್ವಾಮಿಗಳು ಬಿಕ್ಷದ ಶ್ರೀ ಮಹಾದೇವಸ್ವಾಮಿಗಳು ಗುರುಮಲ್ಲೆ ಶ್ವರ ಬಿಕ್ಷದ ಮಠ ಕೊಡಗಾಪುರ ,ಹಾಗೂ ಶ್ರೀ ಕಾಡ ಬಸವೇಶ್ವರ ದೇವಾಲಯ ಸಮಿತಿ ಯವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: