December 22, 2024

Bhavana Tv

Its Your Channel

ಮೊಗೇರ ಸಮಾಜದ ಸಂಘದಿoದ ಪತ್ರಿಕಾ ಗೋಷ್ಟಿ

ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಮೊಗೇರ ಸಮಾಜದವರು ಜಿಲ್ಲೆಯ ಮೂಲ ನಿವಾಸಿಗಳಲ್ಲ, ತಮಿಳುನಾಡು, ಊಟಿ, ಕೊಳ್ಳೇಗಾಲ ಮತ್ತು ಮಂಗಳೂರು ಕಡೆಯಿಂದ ವಲಸೆ ಬಂದವರಾಗಿದ್ದೇವೆ ಎಂದು ಗಜೆಟಿಯರ್‌ನಲ್ಲಿ ದಾಖಲೆ ಇದೆ ಎಂದು ಮೊಗೇರ ಸಮಾಜದ ಸಂಘದ ಅಧ್ಯಕ್ಷ ಅಣ್ಣಪ್ಪ ಮೊಗೇರ ಹೇಳಿದರು.

ಅವರು ವೆಂಕಟಾಪುರದ ಶ್ರೀ ಲಕ್ಷಿö್ಮÃ ಸರಸ್ವತಿ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕೆಲವು ಸಂಘಟನೆಗಳು ನಮ್ಮ ಜನಾಂಗದ ವಿರುದ್ಧ ಕಪೋಲ ಕಲ್ಪಿತ ಆಪಾದನೆಗಳನ್ನು ಮಾಡುತ್ತಿರುವುದನ್ನು ಉಲ್ಲೇಖಿಸಿದ ಅವರು ನಮ್ಮ ಜನಾಂಗದ ಜನರ ಕುಲ ಕಸುಬು ಬೇಟೆಗಾರಿಕೆ, ಕೂಲಿ, ಕೃಷಿ ಮತ್ತು ರಾಜರ ಸೈನ್ಯದಲ್ಲಿ ಸಾಮಾನು ಸರಂಜಾಮು ಹೊರುವುದು ಮಾಡುತ್ತಿದ್ದು ಕಾಲಾನಂತರ ತಮ್ಮ ಉದ್ಯೋಗಕ್ಕಾಗಿ ಕರಾವಳಿ ಭಾಗಕ್ಕೆ ಬಂದಾಗ ಕರಾವಳಿಯಲ್ಲಿ ಪ್ರಚಲಿತವಿದ್ದ ಮಚವೆ (ಹಾಯ್‌ದೋಣಿ)ಗಳಲ್ಲಿ ಸಾಮಾನು ಸರಂಜಾಮು ತುಂಬುವ ಕೆಲಸವನ್ನು ಆರಿಸಿಕೊಂಡರು, ಆ ನಂತರ ಅವರೇ ಮೀನುಗಾರಿಕೆ ಸಹಾಯಕರಾಗಿ, ಮೀನುಗಾರರಾಗಿ ಕೆಲಸ ಆರಂಭಿಸಿದರೇ ವಿನಹ ಕುಲ ಕಸುಬು ಮೀನುಗಾರಿಕೆಯಲ್ಲ ಎಂದು ಹೇಳಿದರು.
1976ರಲ್ಲಿ ಕೇಂದ್ರ ಸರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕೆಲವು ಸಮುದಾಯಗಳಿಗೆ ಪ್ರಾದೇಶಿಕ ನಿರ್ಭಂಧ ತೆಗೆದು ಹಾಕಿದ್ದರಿಂದ ಮೊಗೇರ ಜಾತಿಯೊಂದಿಗೆ ಇನ್ನುಳಿದ 18 ಜಾರಿಯವರು ಈ ಸೌಲಭ್ಯಕ್ಕೆ ಅರ್ಹರಾದರು. ಉತ್ತರ ಕನ್ನಡ ಜಿಲ್ಲೆ ಮುಂಬೈ ಪ್ರಾಂತ್ಯದಲ್ಲಿದ್ದುದರಿAದ 1978ರ ಪೂರ್ವದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿಲ್ಲವೇ ವಿನಹ ಬೇರೆ ಕಾರಣಗಳಿಲ್ಲ. ಪ್ರಾದೇಶಿಕ ನಿರ್ಭಂಧ ತೆಗೆದ ನಂತರ ಕರ್ನಾಟಕ ಸರಕಾರ ಮೊಗೇರ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದೆಯೇ ಹೊರತು ನಾವು ಯಾರ ಸೌಲಭ್ಯವನ್ನು ಅಪಹರಿಸಿಲ್ಲ ಎಂದೂ ಸ್ಪಷ್ಟಪಡಿಸಿದರು.
ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪುನರ್ ಪಡೆಯುವಲ್ಲಿ ರಚಿಸಲಾದ ಹೋರಾಟ ಸಮಿತಿಯ ಅಧ್ಯಕ್ಷ ಎಫ್. ಕೆ. ಮೊಗೇರ ಮಾತನಾಡಿ ಕೆಲವರು ನಮ್ಮ ಜನಾಂಗವನ್ನು ದ್ವೇಷ ಮಾಡುತ್ತಿದ್ದು, ದುರುದ್ದೇಶದಿಂದ ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಅವುಗಳೆಲ್ಲವನ್ನು ನಾವು ಅಲ್ಲಗಳೆಯುತ್ತೇವೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರರಿಗೂ ನಮಗೂ ಬಳಿ (ಗೋತ್ರ)ದಲ್ಲಿ ಸಾಮ್ಯತೆ ಇಲ್ಲ, ಸ್ವಾತಂತ್ರö್ಯ ಪೂರ್ವದಿಂದಲೂ ನಮ್ಮ ಉಪನಾಮ ಮೊಗೇರ ಎಂತಲೇ ಇದ್ದು ನಮಗೂ ಮೊಗವೀರರಿಗೂ ಹೋಲಿಕೆ ಮಾಡಿದ್ದನ್ನು ಖಂಡಿಸುತ್ತೇವೆ. ನಮ್ಮ ಸಮಾಜಕ್ಕೆ ಕುಲಗುರುಗಳಾಗಲೀ, ಮುದ್ರಾಧಾರಣೆಯಾಗಲೀ ಇಲ್ಲ, ನೂಲ ಹುಣ್ಣಿಮೆ ಆಚರಣೆಯೂ ಇಲ್ಲ ಎಂದೂ ಸ್ಪಷ್ಟಪಡಿಸಿದರು. ನಮ್ಮ ಸಮಾಜದಿಂದ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್. ಅಧಿಕಾರಿಗಳಿದ್ದಾರೆ ಎಂದು ವೃಥಾ ಆರೋಪ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ ಎಫ್.ಕೆ. ಮೊಗೇರ ನಮ್ಮ ಸಮಾಜದಲ್ಲಿ 15 ಸಾವಿರ ಜನ ಸರಕಾರಿ ನೌಕರಿಯಲ್ಲಿದ್ದಾರೆ ಎಂದೂ ಆಪಾದಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ನಮ್ಮ ಸಮಾಜದ ಜನಸಂಖ್ಯೆಯೇ 20 ಸಾವಿರದಷ್ಟಿದ್ದು ಅಪಾದನೆಗೆ ಯಾವುದೇ ಹುರುಳಿಲ್ಲ, ಇದು ಜನತೆಯನ್ನು ದಾರಿತಪ್ಪಿಸುವ ಹುನ್ನಾರವಾಗಿದೆ ಎಂದೂ ಹೇಳಿದ್ದಾರೆ. ಇಂತಹ ಹುರುಳಿಲ್ಲದ ಆಪಾದನೆಗಳನ್ನು ಮಾಡುತ್ತಾ ಕೆಲವು ಸಂಘಟನೆಗಳು ಜನರನ್ನು ಹಾಗೂ ಸರಕಾರಕ್ಕೆ ತಪ್ಪು ಸಂದೇಶ ರವಾನೆ ಮಾಡುತ್ತಿರುವುದು ಸಮಾಜ ಒಕ್ಕೊರಲಿನಿಂದ ಖಂಡಿಸುತ್ತದೆ ಹಾಗೂ ಇಂತಹ ಸುಳ್ಳುಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದು ತೀವ್ರವಾಗಿ ವಿರೋಧಿಸುತ್ತದೆ ಎಂದೂ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಸಮಾಜದ ಉಪಾಧ್ಯಕ್ಷ ದಾಸಿ ಮೊಗೇರ, ಮುಕುಂದ ಮೊಗೇರ, ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಮೊಗೇರ, ಪ್ರಮುಖರಾದ ಸದಾನಂದ ಮೊಗೇರ, ಭಾಸ್ಕರ ಮೊಗೇರ ಬೆಳಕೆ, ಭಾಸ್ಕರ ದೈಮನೆ, ಸುಬ್ರಾಯ ಮೊಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: