December 22, 2024

Bhavana Tv

Its Your Channel

ಭಟ್ಕಳದ ಪ್ರತಿಮನೆಯಲ್ಲಿಯೇ ಮೊಳಗಿದ ಅಲ್ಲಾಹು ಅಕ್ಬರ್ ಪಠಣ

ಭಟ್ಕಳ: ಕೋವಿಡ್ -೧೯ ಜಗತ್ತಿನಾದ್ಯಂತ ಸಂಕಷ್ಟವನ್ನು ಸೃಷ್ಟಿಸಿದ್ದು ಎಲ್ಲ ರೀತಿಯ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ. ಭಾನುವಾರ ಭಟ್ಕಳ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಈದುಲ್ ಫೀತ್ರ್ ಹಬ್ಬವನ್ನು ಅತ್ಯಂತ ಸರಳವಾಗಿ ಯಾವುದೇ ಸಡಗರ ಸಂಭ್ರಮಗಳಿಲ್ಲದೆ ಆಚರಿಸಲಾಯಿತು. ಈದ್ಗಾ ಮತ್ತು ಮಸೀದಿಗಳಲ್ಲಿ ನಿರ್ವಹಿಸಲ್ಪಡುವ ಈದ್ ವಿಶೇಷ ಪ್ರಾರ್ಥನೆಗೆ ಈ ಬಾರಿ ಅವಕಾಶವಿಲ್ಲದ ಕಾರಣ ಭಟ್ಕಳದ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಈದ್ ಪ್ರಾರ್ಥನೆ ಸಲ್ಲಿಸಿ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್(ದೇವನು ಮಹಾನನು) ಎಂಬ ಪಠಣವನ್ನು ಮೊಳಗಿಸಿದರು.

ಭಾನುವಾರ ಬೆಳಿಗ್ಗೆ ೮ ಗಂಟೆಯಿAದ ಪ್ರತಿಯೊಂದು ಮನೆಯಲ್ಲಿಯೇ ತಮ್ಮ ಕುಟುಂಬದ ಸದಸ್ಯರೊಡನೆ ನಮಾಝ್ ನಿರ್ವಹಿಸುವುದರ ಮೂಲಕ ಕೊರೋನಾ ಸಂಕಷ್ಟದಿAದ ಜಗತ್ತನ್ನು ಪಾರು ಮಾಡುವಂತೆ ಸೃಸ್ಟಿಕರ್ತನಲ್ಲಿ ಮೊರೆಯಿಟ್ಟು ಕಣ್ಣೀರು ಹಾಕಿದರು.

ಇಂದು ಸಂಪೂರ್ಣ ಲಾಕ್‌ಡೌನ್ ಪಾಲನೆ ಮಾಡುವೊದರೊಂದಿಗೆ ಭಟ್ಕಳದ ಪೊಲೀಸ್ ಅಧಿಕಾರಿಗಳು ತುಂಬಾ ಕಟ್ಟುನಿಟ್ಟಿನ ಕ್ರಮವನ್ನು ಜರಗಿಸಿದ್ದರು. ಯಾರನ್ನೂ ಕೂಡ ಹೊರಗಡೆ ಕಾಲಿಡದಂತೆ ನೋಡಿಕೊಂಡಿದ್ದು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಿದರು.

ಈದ್ ದಿನ ಪ್ರತಿಯೊಬ್ಬರು ತಮ್ಮ ಇತರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಒಂದು ಮೊಹಲ್ಲಾದಿಂದ ಇನ್ನೊಂದು ಮೊಹಲ್ಲಾಕ್ಕೆ ಹೋಗುವ ವಾಡಿಕೆಯಿದ್ದು ಇಂದು ಮಾತ್ರ ಇದಕ್ಕೆ ಯಾವುದೇ ಅವಕಾಶ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ರಮಝಾನ್ ತಿಂಗಳ ಪೂರ್ತಿ ಇಲ್ಲಿ ಯಾವುದೇ ರೀತಿಯ ಸಾಮೂಹಿಕ ಪ್ರಾರ್ಥನೆಗಳು ನಡೆಯದೆ ಮಸೀದಿಗಳಿಗೆ ಬೀಗ ಬಿದ್ದಿತ್ತು. ಇಂದು ಇಲ್ಲಿನ ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ೧೦ಸಾವಿರಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಲಾಕ್‌ಡೌನ್ ನಿಂದಾಗಿ ಈದ್ಗಾ ಮೈದಾನ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

error: