September 14, 2024

Bhavana Tv

Its Your Channel

ಅಧಿಕಾರಿಗಳಿಗೆ ತಾಲೂಕಿನ ಜನತೆ ಸಹಕರಿಸುವಂತೆ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಮನವಿ

ಹೊನ್ನಾವರ: ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಕರೋನಾ ಪ್ರಕರಣ ದ್ರಢಪಟ್ಟಿದ್ದು ಈ ಬಗ್ಗೆ ತಾಲೂಕಿನ ಜನತೆ ಧ್ರತಿಗೆಡದೆ ತಾಲೂಕಾ ಆಡಳಿತದೊಂದಿಗೆ ಸಹಕರಿಸುವಂತೆ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ್ ಭಂಡಾರಿ ಮನವಿ ಮಾಡಿದ್ದಾರೆ.
ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಇವರೆಗೆ 7 ಕರೋನಾ ಪ್ರಕರಣ ದಾಖಲಾಗಿದ್ದು ಇವರೆಲ್ಲರೂ ಮುಂಬೈನಿಂದ ಪ್ರಯಾಣಿಸಿ ಪಟ್ಟಣದ ಸರ್ಕಾರಿ ಕ್ವಾರಂಟೇನ್ ಹಾಗೂ ಹೊಟೇಲ್ ಗಳಲ್ಲಿ ಇರುವರಿಗೆ ಕರೋನಾ ಸೊಂಕು ದ್ರಢ ಪಟ್ಟಿದ್ದು ಹೊನ್ನಾವರ ತಾಲೂಕಿನ ಇತರ ಕಡೆಗಳಲ್ಲಿ ಈ ಸೊಂಕು ಹರಡಿರುವುದಿಲ್ಲ. ಕಾಲಕಾಲಕ್ಕೆ ಸೊಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ತಾಲೂಕಾ ಆಡಳಿತ, ಪೋಲಿಸ್ ಇಲಾಖೆ,ಪಟ್ಟಣ ಪಂಚಾಯತ, ಆರೋಗ್ಯ ಇಲಾಖೆ ಹೊರಡಿಸುವ ಸೂಚನೆಯನ್ನು ಪಾಲಿಸುವಂತೆ ಹಾಗೂ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಜನತೆಯಲ್ಲಿ ಮನವಿ ಮಾಡಿದ್ದಾರೆ.

error: