May 29, 2023

Bhavana Tv

Its Your Channel

ರವಿವಾರ ಕರ್ಫೂಗೆ ಹೊನ್ನಾವರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ.

ಹೊನ್ನಾವರ: ಕರ್ಫ್ಯೂ ಜಾರಿಯಲ್ಲಿ ಇರುವ ಕಾರಣ ಭಾನುವಾರ ಹೊನ್ನಾವರ ಪಟ್ಟಣ ಸಂಪೂರ್ಣವಾಗಿ ಲಾಕ್ ಡೌನ್ ಆಗಿದ್ದು, ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ.

ತಾಲೂಕಿನಲ್ಲಿ ಬಸ್, ಆಟೋ, ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ಸಾರಿಗೆ ಸಂಚಾರವಿರಲಿಲ್ಲ. ಖಾಸಗಿ ವಾಹನದಲ್ಲಿಯೂ ಜನರು ಅನಗತ್ಯವಾಗಿ ತಿರುಗಾಡದಂತೆ ಕ್ರಮ ಕೈಗೊಳ್ಳಲಾಗಿತ್ತು. ಪಟ್ಟಣದ ವಿವಿಧ ಭಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಹಾಲು, ಔಷಧಿ, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಹೋಟೆಲ್‌ಗಳು ಮುಚ್ಚಿದ್ದು, ಜನರ ಸಂಚಾರ ರಸ್ತೆಯಲ್ಲಿ ವಿರಳವಾಗಿರುವುದು ಕಂಡುಬಂತು. ಪೋಲಿಸ್ ಸಿಬ್ಬಂದಿಗಳು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಸೂಕ್ತ ಬಂದವಸ್ತ ಮಾಡಿದ್ದರು. ಪಟ್ಟಣ ಪಂಚಾಯತ ಸಿಬ್ಬಂದಿಗಳು ತಾಲೂಕ ಆಡಳಿತದ ಅಧಿಕಾರಿಗಳು ಕರೋನಾ ಸಂಭದ ನೊಡೆಲ್ ಅಧಿಕಾರಿಗಳು ಪೋಲಿಸ್ ಇಲಾಖೆಗೆ ಸಹಕರಿಸಿದರು.

About Post Author

error: