May 19, 2024

Bhavana Tv

Its Your Channel

ಹೊನ್ನಾವರ- ೧೫ ಮಂದಿ ಕ್ವಾರಂಟೈನ್ ನಿಂದ ಹೋಮ್ ಕ್ವಾರಂಟೈನಗೆ ಶಿಫ್ಟ

ಹೊನ್ನಾವರ: ನೆರೆ ರಾಜ್ಯದಿಂದ ಬಂದು ಸರ್ಕಾರಿ ವಸತಿ ನಿಲಯ ಹಾಗೂ ಹೋಟೇಲನಲ್ಲಿ ಕ್ವಾರಂಟೈನ್ ಆಗಿರುವ ೩೩೯ ಜನರಲ್ಲಿ ೧೮೮ ವರದಿ ಬಂದಿದ್ದು ಇದರಲ್ಲಿ ೭ ಪಾಸಟಿವ್ ಹಾಗೂ ೧೮೧ ನಗೆಟಿವ್ ಬಂದಿದೆ. ೧೫೧ ವರದಿಗಾಗಿ ತಾಲೂಕ ಆಡಳಿತ ಕಾಯುತ್ತಿದೆ. ಸರ್ಕಾರ ಹೊಸ ನಿಯಮದ ಪರಿಗಣಿಸಿ ಒಟ್ಟು ೨೬ ಜನರ ವರದಿ ನಗೆಟಿವ್ ಬಂದಿದ್ದು ಇದರಲ್ಲಿ ಹೋಟೇಲನಲ್ಲಿ ಇರುವ ೧೫ಜನರು ಇಂದು ಬಿಡುಗಡೆ ಮಾಡಿದ್ದು ವಸತಿ ನಿಲಯದ ೧೧ ಮಂದಿಯವರನ್ನು ಮತ್ತೊಮ್ಮೆ ವೈದ್ಯಕೀಯ ಪರಿಕ್ಷೆ ನಡೆಸಿ ಬಿಡುಗಡೆಗೊಳಿಸಲಾಗುತ್ತದೆ ಅಧಿಕಾರಿಗಳು ತಿಳಿಸಿದ್ದಾರೆ.
ಹೋಮ ಕ್ವಾರಂಟೈನ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದು ಮನೆಗೆ ಆಶಾ ಕಾರ್ಯಕರ್ತೆಯರು ತೆರಳಿ ಪ್ರತಿನಿತ್ಯ ಪರಿಶೀಲನೆ ನಡೆಸುತ್ತಾರೆ. ಅಲ್ಲದೇ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಇದರ ಬಗ್ಗೆ ನಿಗಾ ಇರಿಸಲಿದ್ದು ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕೇಸ್ ದಾಖಲಿಸಲಾಗುವುದು.
ಇಂದು ಪ್ರಥಮ ಬಾರಿಗೆ ಕ್ವಾರಂಟೈನ್ ಬಿಡುಗಡೆಯಾಗಿ ಹೋಮ್ ಕ್ವಾರಂಟೈನ್ ಸಿಕ್ಕಿದ್ದು ನಾಳೆ ಇನ್ನಷ್ಟು ಜನರು ಮನೆ ಸೇರಲಿದ್ದಾರೆ.

error: