November 14, 2024

Bhavana Tv

Its Your Channel

ಉತ್ತರ ಕನ್ನಡಕ್ಕೆ ಮತ್ತೆರಡು ಕರೋನಾ ಸೇರ್ಪಡೆ

ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನಲ್ಲಿ ಕ್ವಾರಂಟೈನ್ ಇದ್ದ ದಂಪತಿಗೆ ಇಂದು ಕೊರೋನಾ ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದಿದ್ದ ೨೦ ವರ್ಷದ ಪತ್ನಿ ಹಾಗೂ ೨೪ ವರ್ಷದ ಪತಿಗೆ ಸೋಂಕು ದೃಢಪಟ್ಟಿದೆ. ಮೇ ೧೭ರಂದು ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಂದಿದ್ದ ಇವರನ್ನು ನೇರವಾಗಿ ಕ್ವಾರಂಟೈನ್ ಗೆ ನೀಡಲಾಗಿತ್ತು. ಯಲ್ಲಾಪುರದಲ್ಲಿ ನಿನ್ನೆಯವರೆಗೆ ಮೂವರಲ್ಲಿ ಸೋಂಕು ದೃಢಪಟ್ಟಿತ್ತು. ಇಂದು ಈ ಇಬ್ಬರಲ್ಲಿ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ ಪಟ್ಟಣದಲ್ಲಿ ೫ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೬೮ ಆಗಿದ್ದು, ೩೭ ಸಕ್ರಿಯ ಸೋಂಕಿತರಿದ್ದಾರೆ.

error: