July 14, 2024

Bhavana Tv

Its Your Channel

ಹೊನ್ನಾವರದಲ್ಲಿ ಮತ್ತೊಂದು ಕರೋನಾ ಪಾಸಟಿವ್; ತಾಲೂಕಿನಲ್ಲಿ ಸೊಂಖಿತರ ಸಂಖ್ಯೆ ೮ಕ್ಕೆ ಏರಿಕೆ

ಕಾರವಾರ: ಜಿಲ್ಲೆಯಲ್ಲಿ ದುಬೈ ನಂತರ ಮುಂಬೈ ನಿವಾಸಿಗಳಿಂದ ಕರೋನಾ ಪ್ರಕರಣ ಪತ್ತೆಯಾಗುತ್ತಲ್ಲೆಇದ್ದು ಇಂದು ಹೊನ್ನಾವರದ ಬಂದರು ರಸ್ತೆಯ ನಿವಾಸಿ ೪೫ ವರ್ಷದ ವ್ಯಕ್ತಿಗೆ ಕೊರೊನಾ ಪೊಸಿಟಿವ್ ಬಂದಿರುವುದು ದೃಡಪಟ್ಟಿದೆ. ಮುಂಬೈ ನಿಂದ ಬೆಳಗಾವಿ ಮೂಲಕವಾಗಿ ೨೫ ಜನರೊಂದಿಗೆ ಮೊದಲು ಭಟ್ಕಳಕ್ಕೆ ಬಂದು ಇಳಿದಿದ್ದ. ಇವನೊಂದಿಗೆ ೧೧ ಜನರು ಭಟ್ಕಳದವರು ಸಹ ಇದ್ದರು. ಉಳಿದವರು ಉಡುಪಿಯವರಾಗಿದ್ದು ಉಡುಪಿಗೆ ತೆರಳಿದ್ದರು.
ಈತ ಹಾಗೂ ಈತನೊಂದಿಗೆ ಬಂದಿದ್ದವರನ್ನು ಮೊದಲು ಭಟ್ಕಳದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೇ ಈತನಲ್ಲಿ ಜ್ವರ ಕಾಣಿಸಿಕೊಂಡ ಕಾರಣ ಈತನನ್ನು ಭಟ್ಕಳದಿಂದ ಈತನ ಊರಾದ ಹೊನ್ನಾವರದಲ್ಲಿ ಕರೆದೊಯ್ದು ಕ್ವಾರಂಟೈನ್ ಮಾಡಲಾಗಿದ್ದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಈತನಿಗೆ ಫಾಸಿಟಿವ್ ಇರುವುದು ದೃಡವಾಗಿದೆ. ಹೊನ್ನಾವರದ ಸರ್ಕಾರಿ ಆಸ್ಪತ್ರೆಯಿಂದ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ಗೆ ಇಂದು ಮಧ್ಯಾನವೇ ಕಳುಹಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನೂತನ ಸಕ್ರಿಯ ಪ್ರಕರಣಗಳು ೩೭ಕ್ಕೆ ಏರಿಕೆಯಾಗಿದ್ದು ಡಿಸ್ಟಾರ್ಜ್ಗೊಂಡ ೩೨ ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೬೯ ಪ್ರಕರಣಗಳು ದಾಖಲಾಗಿದ್ದು ತಾಲೂಕಿನಲ್ಲಿ ೮ಜನ ಸೊಂಕಿತರು ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ

error: