ಭಟ್ಕಳ : ಕೊರೊನಾ ಲಾಕ್‌ಡೌನ್‌ನಿಂದಾಗಿ ಬೇರೆ ರಾಜ್ಯದ ಕಾರ್ಮಿಕರು ಭಟ್ಕಳದಲ್ಲಿ ಕೆಲಸ ಮಾಡಿಕೊಂಡಿದ್ದು, ಇಂದು ೧೧೮ ಮಂದಿಯನ್ನು ತಾಲೂಕು ಆಡಳಿತ ರೈಲಿನ ಮೂಲಕ ಜಾರ್ಖಂಡ್‌ಗೆ ಉಚಿತವಾಗಿ ಕಳುಹಿಸಿಕೊಟ್ಟಿತು.
ಸರ್ಕಾರದ ಆದೇಶದಂತೆ ಭಟ್ಕಳ ತಾಲೂಕು ಆಡಳಿತ ಸದ್ಯ ಜಾರ್ಖಂಡ್ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ಕೆಲಸ ಮಾಡುತ್ತಿದೆ. ತಾಲೂಕಿನಲ್ಲಿ ಮೀನುಗಾರಿಕೆ ವೃತ್ತಿ, ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಒಟ್ಟು ೧೧೮ ಮಂದಿಯನ್ನು ಇಲ್ಲಿನ ಹಳೆ ಬಸ್ ನಿಲ್ದಾಣದಿಂದ, ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆ ಮಾಡಿ ಅವರ ಹೆಸರನ್ನು ಪರಿಶೀಲನೆ ಮಾಡಲಾಯಿತು. ಬಳಿಕ ಬಸ್ ಮೂಲಕ ಮಂಗಳೂರಿಗೆ ಕಳುಹಿಸಿ, ಅಲ್ಲಿಂದ ಶ್ರಮಿಕ್ ರೈಲಿನಲ್ಲಿ ತವರಿಗೆ ಕಳುಹಿಸಿದರು.ಈ
ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ರವಿಚಂದ್ರ, ವಲಸೆ ಕಾರ್ಮಿಕ ವಿಭಾಗದ ಅಂತಾರಾಜ್ಯ ತಾಲೂಕು ನೋಡೆಲ್ ಅಧಿಕಾರಿ ಸಂಶುದ್ದೀನ್, ಭಟ್ಕಳ ಕಾರ್ಮಿಕ ಇಲಾಖೆಯ ರೇಖಾ ನಾಯ್ಕ, ಮೀನುಗಾರಿಕಾ ಇಲಾಖೆ ಅಧಿಕಾರಿ ಚೇತನ್, ನಗರ ಠಾಣೆ ಪಿ.ಎಸ್.ಐ ಭರತ್ ನಾಯಕ ಸೇರಿದಂತೆ ತಹಶೀಲ್‌ದ್ದಾರ್ ಕಚೇರಿ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ಕಾರ್ಮಿಕ ಇಲಾಖೆ ಸಿಬ್ಬಂದಿ ಇದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.