ಕುಮಟಾ: “ಯೋಗ ಎನ್ನುವುದು ಮನಸ್ಸನ್ನು ಶಾಂತಗೊಳಿಸಿ ವರ್ತಮಾನದಲ್ಲಿ ದೇಹ ಹಾಗೂ ಮನಸ್ಸನ್ನು ಏಕಾಗೃತೆಗೊಳಿಸುವ ಕ್ರಿಯೆಯಾಗಿದೆ” ಎಂದು ಮಹಾತ್ಮಗಾಂಧೀ ವಿದ್ಯಾವರ್ಧಕ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ ನುಡಿದರು.
ಅವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ನಡೆದ ವಿಶ್ವ ಯೋಗದಿನಾಚರಣೆ 2023 ಉದ್ಘಾಟಿಸಿ ಮಾತನಾಡಿದರು. “ಮಾನಸಿಕ ಸ್ಥಿಮಿತವಿಲ್ಲದ ಮನುಷ್ಯ ಹಲವಾರು ಒತ್ತಡಗಳಿಗೆ ಸಿಲುಕಿ ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾನೆ, ಸರಿಯಿಲ್ಲದ ಜೀವನಶೈಲಿ, ಸ್ಥಿಮಿತವಿಲ್ಲದ ಮನಸ್ಸು ಇದಕ್ಕೆ ಕಾರಣ ಇಂತಹ ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕವಾಗಿ ಪರಿಹರಿಸಿಕೊಳ್ಳಬಹುದಾಗಿದೆ” ಎಂದರು.
ಹೈಸ್ಕೂಲ್ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ಮಾತನಾಡಿ ‘ಯೋಗಃ ಚಿತ್ತ ವೃತ್ತಿ ನಿರೋಧಃ’ ಮನಸ್ಸಿನಲ್ಲಿ ಏಳುವ ಅಲೆಗಳ ನಿರೋಧವೇ ಯೋಗ ಎಂದರು. ಯೋಗ ಮನಸ್ಸಿನ ಚಂಚಲತೆ ಹೋಗಲಾಡಿಸಿ ಮನೋನಿಗ್ರಹಕ್ಕೆ ಉತ್ತಮ ಆರೋಗ್ಯಕ್ಕೆ ಸಮುದಾಯದ ಉದ್ಧಾರಕ್ಕೆ ಯೋಗ ಬಳಕೆಯಾಗಲಿ” ಎಂದರು.
ದೈಹಿಕ ಶಿಕ್ಷಕರಾದ ನಾಗರಾಜ ನಾಯಕ ನಿರ್ದೇಶನದಂತೆ ಹೈಸ್ಕೂಲ್ ವಿದ್ಯಾರ್ಥಿಗಳು ಯೋಗಾಸನದ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ನಂತರ ವಿದ್ಯಾರ್ಥಿಗಳಿಗೆ “ಪುರಾತನ ಕಾಲದಿಂದಲೂ ಯೋಗಾಭ್ಯಾಸವನ್ನು ಭಾರತದಲ್ಲಿ ಜೀವನದ ಒಂದು ಭಾಗವಾಗಿ ಪಾಲಿಸುತ್ತಾ ಬಂದಿದ್ದಾರೆ. ಉತ್ತಮ ಆರೋಗ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಯೋಗವು ಮಹತ್ವದ ಸ್ಥಾನವನ್ನು ಹೊಂದಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ್, ಎನ್ ರಾಮು ಹಿರೇಗುತ್ತಿ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಹಾಗೂ ಮಹಾತ್ಮಾಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕರಾದ ಸುಮನ್ ಫರ್ನಾಂಡೀಸ್, ಶಿಕ್ಷಕರಾದ ವಸಂತಬಾಯಿ, ಜಯಶ್ರೀ ಪಟಗಾರ, ತನುಜಾ ಹರಿಕಂತ್ರ, ಮಂಗಲಾ ಪಟಗಾರ ಉಪಸ್ಥಿತರಿದ್ದರು. ಎಲ್ಲಾ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯ ಪ್ರಯೋಜನ ಪಡೆದುಕೊಂಡರು.
ವರದಿ :ಎನ್ ರಾಮು ಹಿರೇಗುತ್ತಿ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ