April 29, 2024

Bhavana Tv

Its Your Channel

ಮೂಲ ಸ್ಥಾನವಾದ ಚಂದಾವರದ ಹನುಮಂತ ದೇವಾಲಯಕ್ಕೆ ಹೊರಟ ಹನುಮಂತ ದೇವರು

ಕುಮಟಾ ; ಪಟ್ಟಣದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಚಂದಾವರದ ಸೀಮೆಯ ಹನುಮಂತ ದೇವರು ಸೀಮೆಯ ಸಂಚಾರದ ವೇಳೆ ಕೆಲ ದಿನಗಳವರೆಗೆ ಸಾನಿದ್ಯ ವಹಿಸಿದ್ದು, ತನ್ನ ಮೂಲ ಸ್ಥಾನವಾದ ಚಂದಾವರದ ಹನುಮಂತ ದೇವಾಲಯಕ್ಕೆ ಭಕ್ತರ ಜೈಕಾರದೊಂದಿಗೆ ಮೆರವಣಿಗೆಯಲ್ಲಿ ತೆರಳಿತು.

ಪ್ರತಿವರ್ಷ ಕಾರ್ತಿಕ ಮಾಸದ ದೀಪೋತ್ಸವದ ನಂತರ ದೇವಾಲಯದಿಂದ ಸೀಮೆಯ ಭಕ್ತರ ಕಷ್ಟಗಳನ್ನು ಪರಿಹಾರ ಮಾಡಲು ಸೀಮೆಗೆ ಒಳಪಡುವ ಗ್ರಾಮಗಳಿಗೆ ಸಂಚಾರ ಮಾಡಲಾಗುತ್ತದೆ. ಈ ಭಾರಿ ಕೂಡಾ ಸೀಮೆಯ ಗ್ರಾಮಗಳನ್ನು  ಸಂಚಾರವನ್ನು  ನಡೆಸಿ ಭಕ್ತರ ಕಷ್ಟಗಳನ್ನು ಪರಿಹರಿಸಿ ಅಭಯವನ್ನು ನೀಡಿದ ಹನುಮಂತ ದೇವರ ಪಲ್ಲಕ್ಕಿಯು ಕುಮಟಾದ ಶಾಂತಿಕಾ ಪರಮೇಶ್ವರಿ ದೇವಾಲಯಲ್ಲಿ ಕೆಲವು ದಿನಗಳ ಕಾಲ ಸಾನಿಧ್ಯ ವಹಿಸಿದ ಶ್ರೀ ದೇವರ ಪಲಕ್ಕಿಯು ಸೀಮೆಯ ಸಂಚಾರ ಮುಗಿಸಿ ತನ್ನ ಮೂಲ ಸ್ಥಾನವಾದ ಚಂದಾವರದ ಹನುಮಂತ ದೇವಾಲಯಕ್ಕೆ ತೆರಳಿತು. 
ದೇವರ ಪಲ್ಲಕ್ಕಿಗೆ ಹೂವುಗಳಿಂದ ಅಲಂಕರಿಸುವುದರ ಜೋತೆಗೆ ಪಲಕ್ಕಿಗೆ ಶೃಂಗಾರ ಹಾಗೂ ಹೂವುಗಳಿಂದ ಪಲ್ಲಕ್ಕಿಯನ್ನು ಅಲಂಕರಿಸಿ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಯು ಮೆರವಣಿಗೆ ಹೊರಟಿತು. ದಾರಿಯುದ್ದಕ್ಕೂ ಭಕ್ತರು ಜೈ ಶ್ರೀ ರಾಮ ಜಯಗೋಷದೊಂದಿಗೆ, ಹನುಮಂತ ದೇವರ ಗೀತೆಯನ್ನು ಒಳಗೊಂಡ ವಾಹನದೊಂದಿಗೆ ಜನರು ದೇವರ ಪಲಕ್ಕಿ ಜೋತೆಗೆ ಕುಮಟಾದ ಶಾಂತಿಕಾ ಪರಮೇಶ್ವರಿ ದೇವಾಲಯದಿಂದ ಚಂದಾವರದ ಹನುಮಂತ ದೇವಾಲಯದ ವರೆಗೆ ಸುಮಾರು 10 ಕಿ.ಮೀ ವರೆಗೆ ರಸ್ತೆಯಲ್ಲಿ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿದು, ದಾರಿಯುದ್ದಕ್ಕೂ ಪ್ರತಿಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆಯ  ಸ್ವಾಗತಕ್ಕೆ ತಳಿರು ತೋರಣಗಳಿಂದ ಸಿಂಗರಿಸಿದ ಮಂಟಪವನ್ನು ಮಾಡಿದ್ದರು. ಭಕ್ತರು ದೇವರಿಗೆ ಹಣ್ಣು ಕಾಯಿಯನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. 
ಶ್ರೀ ಹನುಮಂತ ದೇವರ ಮೇರವಣಿಗೆಯಲ್ಲಿ ಶ್ರೀ ದೇವರ ಉತ್ಸವ ಸಮಿತಿ ಹಳದೀಪುರದ ಸಾಲಿಕೇರಿಯ ಭಕ್ತರು ನಿರ್ಮಿಸಿದ  ರಾಮನ ಚಿತ್ರವುಳ್ಳ  ಸ್ಥಬ್ತ ಚಿತ್ರಗಳು ಜನರ ಗಮನ ಸೇಳೆಯಿತು. ಸುಮಾರು 5 ಸಾವಿರಕ್ಕೂ ಅಧಿಕ ಜನರು ಈ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು ನಂತರ ಪರಿಸ್ಥಿತಿ ತಿಳಿಗೊಂಡಿತು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದAತೆ ತಡೆಯಲು ಪೋಲಿಸ್ ಬಂದೋಬಸ್ತ ಕಲ್ಪಿಸಲಾಗಿತ್ತು.
error: