December 22, 2024

Bhavana Tv

Its Your Channel

ಶತಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕ್ರೀಡೋತ್ಸವ

ಮೈಸೂರು : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ( ರಿ) ಬೆಂಗಳೂರು ಇದರ ಶತಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕ್ರೀಡೋತ್ಸವ ಮೈಸೂರಿನ ಮಹಾರಾಜ ಕ್ರೀಡಾಂಗಣದಲ್ಲಿ ರಾಜ್ಯಾಧ್ಯಕ್ಷರಾದ ಸಿ.ರಮೇಶ, ಮಲ್ಲಿಕಾರ್ಜುನ ಸಿ.ವಿ. ಹಾಗೂ ಮೈಸೂರು ಜಿಲ್ಲಾ ಸಮಿತಿಯ ರಾಘವೇಂದ್ರರವರ ಮುಂದಾಳತ್ವದಲ್ಲಿ ನಡೆಯಿತು. ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಸದಸ್ಯರುಗಳು, ರಾಜ್ಯದ ಮೂವತ್ತು ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಿ ಮಾತನಾಡಿದ್ದು ಕ್ರೀಡಾಪಟುಗಳಿಗೆ ಸ್ಪೂರ್ತಿ ತಂದಿತ್ತು.ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸದಸ್ಯರಾದ ಸಿದ್ಧಾರ್ಥ ನಾಯ್ಕರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇಣುಗೋಪಾಲ ಮದ್ಗುಣಿ, ಪ್ರಶಾಂತ ನಾಯ್ಕ, ರಾಜೇಶ್ ಭೋವಿ ಹಾಗೂ ಅನೇಕ ಸದಸ್ಯರುಗಳು ಹಾಜರಿದ್ದರು.
ವರದಿ ; ವೇಣುಗೋಪಾಲ ಮದ್ಗುಣಿ, ಯಲ್ಲಾಪುರ

error: