
ಹೊನ್ನಾವರ ; ಭಟ್ಕಳ ಹೊನ್ನಾವರ ಕ್ಷೇತ್ರಕ್ಕೆ ತನ್ನ ನೆಚ್ಚಿನ ನಾಯಕನ ಗೆಲುವಿಗೆ ಹರಕೆ ಹೊತ್ತ ತಾಲೂಕಿನ ಕಾಸರಕೋಡ್ ಯುವಕ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದು ನೆಚ್ಚಿನ ನಾಯಕನಿಗಾಗಿ ತಾನು ಹೊತ್ತಿದ್ದ ಹರಕೆ ತೀರಿಸಿದ್ದಾನೆ.
ತಾಲೂಕಿನ ಕಾಸರಕೋಡ್ ನಿವಾಸಿ ಮೀನುಗಾರ ಮುಖಂಡ ರಾಜು ತಾಂಡೇಲ್ ಭಟ್ಕಳ/ ಹೊನ್ನಾವರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಮಂಕಾಳ ವೈದ್ಯ ಗೆಲುವು ಸಾಧಿಸಿದರೆ ಪಾದಯಾತ್ರೆಯ ಮೂಲಕ ಬಂದು ಶ್ರೀ ಮಂಜುನಾಥನ ದರ್ಶನ ಮಾಡುವುದಾಗಿ ಹರಕೆ ಹೊತ್ತಿದ್ದರು. ಮಂಕಾಳ ವೈದ್ಯ ಗೆದ್ದು ಶಾಸಕರಾಗಿ, ಸಚಿವರಾದ ತರುವಾಯ ತನ್ನ ಹರಕೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದರ್ಶನಕ್ಕೆ ಜೂನ್.19 ರಂದು ಪಾದಯಾತ್ರೆ ಕೈಗೊಂಡು ಜೂನ್ 25 ರಂದು ಧರ್ಮಸ್ಥಳಕ್ಕೆ ತಲುಪಿ ದೇವರ ದರ್ಶನ ಪಡೆದು ತಮ್ಮ ಹರಕೆ ಪೂರೈಸಿದರು. ಧರ್ಮಸ್ಥಳದಿಂದ ತಂದ ಪ್ರಸಾದವನ್ನು ಸಚೀವರಾದ ಮಂಕಾಳ ವೈದ್ಯ ಮನೆಗೆ ತೆರಳಿ ವಿತರಿಸಿದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ