May 10, 2024

Bhavana Tv

Its Your Channel

ಲಯನ್ಸ ಕ್ಲಬ್ ವತಿಯಿಂದ ಹೊನ್ನಾವರ ತಾಲೂಕ ಆಸ್ಪತ್ರೆಗೆ ಶವವಿಡುವ ಪೆಟ್ಟಿಗೆ

ಹೊನ್ನಾವರ ; ತಾಲೂಕ ಆಸ್ಪತ್ರೆಗೆ ಲಯನ್ಸ ಕ್ಲಬ್ ವತಿಯಿಂದ ಶವವಿಡುವ ಪೆಟ್ಟಿಗೆ ಮತ್ತು ನೂತನವಾಗಿ ನಿರ್ಮಾಣವಾದ ಶವಗಾರದ ಕೊಠಡಿ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ತಾಲೂಕ ಆಸ್ಪತ್ರೆಯ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಲಯನ್ಸ ಡಿಸ್ಟ್ರಿಕ್ಟ್ ಗವರ್ನರ್ ಸುಗ್ಗಲಾ ಎಲಿಮಲಿ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಹೊನ್ನಾವರ ಲಯನ್ಸ ಕ್ಲಬ್ ಸಮಾಜಮುಖಿ ಕಾರ್ಯದ ಜೊತೆ ತೀರಾ ಅಗತ್ಯವಿರುವ ಸೌಲಭ್ಯ ವಿತರಿಸುವಲ್ಲಿ ಜಿಲ್ಲೆಯ ಮುಂಚೂಣಿ ಕ್ಲಬ್ ಆಗಿದೆ. ಸೇವೆ ಮಾಡಲು ಕೊಟ್ಟ ಅವಕಾಶವನ್ನು ಕ್ಲಬ್ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುವ ಮೂಲಕ ತಮಗೆ ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. 135ಕ್ಕೂ ಹೆಚ್ಚಿನ ಸೇವಾ ಕಾರ್ಯ ತಾಲೂಕ ಕ್ಲಬ್ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಮಾತನಾಡಿ ಆಸ್ಪತ್ರೆ, ಶಾಲಾ ಕಾಲೇಜಿಗೆ ಅನೇಕ ಕೊಡುಗೆ ನೀಡುವ ಮೂಲಕ ಲಯನ್ಸ್ ಕ್ಲಬ್ ಸೇವೆ ಅನನ್ಯವಾದದು. ಕಳೆದೆರಡು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟ ಮೃತದೇಹವನ್ನು ಖಾಸಗಿ ಆಸ್ಪತ್ರೆ ಮತ್ತು ಬೇರೆ ತಾಲೂಕಿನ ಆಸ್ಪತ್ರೆಯಲ್ಲಿ ಇಡುವ ಸ್ಥಿತಿ ಎದುರಾಗಿತ್ತು. ಮುಂದಿನ ದಿನದಲ್ಲಿ ಈ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ ಕ್ಲಬ್ ಅಧ್ಯಕ್ಷರಾದ ಕೆ.ಸಿ. ವರ್ಗಿಸ್ ಮಾತನಾಡಿ ವರ್ಷವಿಡೀ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಸದಸ್ಯರ ಸಹಕಾರದಿಂದ ನೇರವೇರಿದೆ. ತಾಲೂಕ ಆಸ್ಪತ್ರೆಯಲ್ಲಿ ಶುಚಿತ್ವ ಹಾಗೂ ಇಲ್ಲಿಯ ಸೇವೆಯು ಉತ್ತಮವಾಗಿದೆ. ಮಾರ್ಥೊಮಾ ಸಂಸ್ಥೆಯ ಸಹಕಾರದ ಮೇರೆಗೆ ಶವಗಾರ ಕಟ್ಟಡ ನಿರ್ಮಾಣವಾಗಿದೆ ಎಂದು ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.
ಲಯನ್ಸ ಕಾರ್ಯದರ್ಶಿ ರಾಜೇಶ ಸಾಲೆಹಿತ್ತಲ್ ಪ್ರಾಸ್ತವಿಕವಾಗಿ ಮಾತನಾಡಿ ಹೆಚ್ಚಿನ ಪ್ರಮಾಣದಲ್ಲಿ ತಾಲೂಕ ಆಸ್ಪತ್ರೆಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದು, ತಾಲೂಕಿನ ಒಂದೇ ಶವ ಪೆಟ್ಟಿಗೆ ಇರುದರಿಂದ ಇನ್ನೊಂದು ತೀರಾ ಅಗತ್ಯವಿತ್ತು. ಬಡ ಹಾಗೂ ಮಧ್ಯಮ ವರ್ಗದವರಿಗೆ ಇದರಿಂದ ಉಪಯೋಗ ಆಗಲಿದೆ ಎಂದು ಕ್ಲಬ್ ಕಾರ್ಯವೈಖರಿ ವಿವರಿಸಿದರು.
ವೇದಿಕೆಯಲ್ಲಿ ರೀಜನ್ ಚೇರ್ ಪರ್ಸನ್ ಜ್ಯೋತಿ ಭಟ್, ಸಂಜಯ್, ಆಸ್ಪತ್ರೆಯ ಎ.ಐ.ಓ . ಶಶಿಕಲಾ, ಝೊನ್ ಚೇರ್ ಪರ್ಸನ್ ನಾಗರಾಜ ಭಟ್, ಲಯನ್ಸ ಕ್ಲಬ್ ಕಾರ್ಯದರ್ಶಿ ರಾಜೇಶ ಸಾಲೆಹಿತ್ತಲ್, ಖಜಾಂಚಿ ರೋಶನ್ ಶೇಟ್ ಸದಸ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: