ಯಲ್ಲಾಪುರ/ ಸಂಕಲ್ಪಸೇವಾ ಸಂಸ್ಥೆಯ ಆಶ್ರಯದಲ್ಲಿ ರಂಗ ಸಂಹ್ಯಾದ್ರಿ ಹಾಗೂ ವಿಷನ್ ಗ್ರುಪ್ ಸಹಯೊಗದೊಂದಿಗೆ ಫೆ.23 ರಂದು ಬೆಳಿಗ್ಗೆ 10 ರಿಂದ ಸಂಜೆ 6 ವರೆಗೆ ನಿಸರ್ಗಮನೆಯಲ್ಲಿ “ಸಂಕಲ್ಪ ಯಕ್ಷಗಾನೋತ್ಸವ ಹಿಮ್ಮೇಳ ಗಾನ ಹಬ್ಬ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಬುಧವಾರ ಈ ಕುರಿತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡುತ್ತಿದ್ದರು. ಕಳೆದ 33 ವರ್ಷಗಳಿಂದ ಸಂಕಲ್ಪ ಸಂಸ್ಥೆ ನಿರಂತರವಾಗಿ ಉತ್ಸವ, ವಿವಿಧ ಕಾರ್ಯಕ್ರಮಗಳ ಮೂಲಕ ಕಲೆಗೆ, ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಸದಭಿರುಚಿಯ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಾಣ ಮಾಡಿದೆ. ಜತೆಗೆ ಕಲೆ, ಸಂಸ್ಕೃತಿ, ಪ್ರವಾಸೋಧ್ಯಮ, ಆರೋಗ್ಯ ಶಿಬಿರ ಹೀಗೆ ವಿವಿಧ ಮಜಲುಗಳಲ್ಲಿ ಸಾಂಸ್ಕೃತಿಕ ಪರಂಪರೆಯ ತೇರನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿದೆ. ಕಳೆದ ನವೆಂಬರದಲ್ಲಿ ವಾರಗಳ ಕಾಲ ಸಂಕಲ್ಪ ಉತ್ಸವ ಯಶಸ್ವಿನ ಮುನ್ನುಡಿ ಬರೆದಿದೆ. ಈಗ ಒಂದು ದಿವಸದ ಹಿಮ್ಮೇಳಗಾನ ಹಬ್ಬ ಸಂಘಟಿಸಲಾಗಿದೆ. ಇದೇ ಸಂದರ್ಭದಲ್ಲಿ ನೂತನ ಕಲಾಭವನ ಉದ್ಘಾಟಿಸಲಾಗುತ್ತದೆ. ಯಕ್ಷಋಷಿ ದಿ.ಹೊಸ್ತೋಟ ಮಂಜುನಾಥ ಭಾಗ್ವತರಿಗೆ ಕಾರ್ಯಕ್ರಮವನ್ನು ಸಮರ್ಪಿಸಲಾಗುತ್ತಿದೆ ಎಂದರು.
ಹಿಮ್ಮೇಳ ವೈಭವದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಕಾವ್ಯಶ್ರೀ ಅಜೇರು, ಸರ್ವೆಶ್ವರ ಮೂರುರು, ರವೀಂದ್ರ ಭಟ್ಟ ಅಚವೆ, ಅನಂತ ದಂತಳಗಿ, ಗೋಪಾಲಕೃಷ್ಣ ಜೋಗಿಮನೆ ಕಾರ್ಯನಿರ್ವಹಿಸಲಿದ್ದಾರೆ. ಮದ್ದಲೆವಾದಕರಾಗಿ, ಗಣಪತಿ ಭಾಗ್ವತ್ ಕವಾಳೆ,ಸುನಿಲ್ ಬಂಡಾರಿ,ಎನ್.ಜಿ.ಹೆಗಡೆ,ಕೃಷ್ಣ ಪ್ರಕಾಶ ಉಳಿತ್ತಾಯ,ಪಿ.ಕೆ.ಹೆಗಡೆ ಕಾರ್ಯನಿರ್ವಹಿಸಲಿದ್ದಾರೆ.
ಚಂಡೆವಾದನದಲ್ಲಿ ಕೃಷ್ಣಯಾಜಿ,ಗಣೇಶ್ ಗಾಂವ್ಕಾರ,ಮಹಾಬಲೇಶ್ವರ ನಾಯಕನಕೆರೆ,ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ,ಸುಜನ್ ಹಾಲಾಡಿ ಭಾಗವಹಿಸಲಿದ್ದಾರೆ. ಯಕ್ಷನೃತ್ಯದಲ್ಲಿ ತೇಜಸ್ವಿ ಗಾಂವ್ಕಾರ ಹೆಗ್ಗಾರ,ವರುಣ ಹೆಗಡೆ, ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಎನ್. ಗಾಂವ್ಕಾರ, ಪ್ರಸಾದ ಹೆಗಡೆ, ಸಿ.ಜಿ.ಹೆಗಡೆ, ಗೋಪಣ್ಣ ತಾರಿಮಕ್ಕಿ ಇದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.