December 6, 2024

Bhavana Tv

Its Your Channel

ನಾಡಿನ ಹಿರಿಯ ಚುಟುಕು ಕವಿ ವಿಡಂಬಾರಿ ಇನ್ನಿಲ್ಲ.

ನಾಡಿನ ಹಿರಿಯ ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಖ್ಯಾತ ಚುಟುಕು ಕವಿ ಎಂದೇ ಪ್ರಸಿದ್ಧರಾದ ವಿಡಂಬಾರಿಯವರು ಈಗ ಕಡತೋಕೆಯಲ್ಲಿ ಮಗಳ ಮನೆಯಲ್ಲಿ ನಮ್ಮನ್ನಗಲಿರುವುದು ಅಂತ್ಯಂತ ದುಃಖದ ಸಂಗತಿ. ಇವರು1935 ಫೆಬ್ರುವರಿ 29 ಜನಿಸಿದವರು. ದೇವದಾಸಿಯ ಮಗನಾಗಿ ಹುಟ್ಟಿ ಈ ಸಮಾಜದ ಬದಲಾವಣೆಗೆ ತನ್ನ ಕೆಲಸ, ಚಿಂತನೆಗಳ ಮೂಲಕ ಕೊನೆಯ ವರೆಗೆ ಶ್ರಮಿಸಿದವರು. ಕಡುಬಡತನದ ಮಧ್ಯೆಯೂ ಮಾನವೀಯ ಮೌಲ್ಯಗಳಿಗಾಗಿ ತುಡಿದವರು. ಸದಾ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಂಡ ಇವರು ಮೂಢನಂಬಿಕೆ ವಿರುದ್ಧ ಪ್ರಕರವಾಗಿ ಚುಟುಕು ಬರೆಯುತ್ತಿದ್ದರು. ಅಂಚೆ ಪೇದೆಯ ಆತ್ಮಕತೆಯನ್ನೂ ಒಳಗೊಂಡು ಐದಕ್ಕೂ ಹೆಚ್ಚು ಪ್ರಕಟಿತ ಬರಹಗಳನ್ನು ಹೊರತಂದಿದ್ದಾರೆ.

error: