December 20, 2024

Bhavana Tv

Its Your Channel

ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಕಾರ್ಯಚಟುವಟಿಕೆಗಳ ಸಭೆಗೆ ಚಾಲನೆ

ಮಂಡ್ಯ: ಜಿಲ್ಲೆಯ ಕೆ ಆರ್ ಪೇಟೆಯ ತಾಲ್ಲೂಕಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಂಡಲ ಅಧ್ಯಕ್ಷರಾದ ಪರಮೇಶ್ ಅರವಿಂದ್ ರವರ ಅಧ್ಯಕ್ಷತೆಯಲ್ಲಿ, ತಾಲೋಕು ರೈತ ಮೋರ್ಚಾ ಅಧ್ಯಕ್ಷ ಸಿ.ಜೆ.ಶಿವರಾಮೇಗೌಡರವರ ನೇತೃತ್ವದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜೋಗಿ ಗೌಡರವರು ಸಭೆಯನ್ನು ತಾಲೂಕು ಕೋರ್ ಕಮಿಟಿ ಸಭೆಯನ್ನು ಉದ್ಘಾಟಿಸಿ ರೈತ ಮೋರ್ಚಾ ಕಾರ್ಯಚಟುವಟಿಕೆಗಳ ಸಭೆಗೆ ಚಾಲನೆ ನೀಡಿದರು .

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಜೋಗಿಗೌಡ.. ತಾಲೂಕಿನ ರೈತರಿಗೆ ಕೃಷಿಗೆ ಸಂಭAದಪಟ್ಟ ಸಮಸ್ಯೆಗಳನ್ನು ತಾಲ್ಲೂಕು ಘಟಕಗಳ ಅಧ್ಯಕ್ಷರು ಪಕ್ಷಾತೀತವಾಗಿ ಬಗೆಹರಿಸಬೇಕು, ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪದಾಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ತಾಲೋಕು ಒಬಿಸಿ ಅಧ್ಯಕ್ಷರಾದ ಸಾರಂಗಿ ನಾಗರಾಜು, ತಾಲೂಕು ಉಪಾಧ್ಯಕ್ಷ ಕರ್ತೇನಹಳ್ಳಿ ಸುರೇಶ್, ತಾಲೂಕು ಸಾಮಾಜಿಕ ಜಾಲತಾಣದ ಪ್ರಮುಖ ಸಾರಂಗಿ ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ರೈತ ಮೋರ್ಚಾ ಪ್ರಧಾನ ತಾಲೂಕು ಉಪಾಧ್ಯಕ್ಷ ಅಕ್ಕಿಹೆಬ್ಬಾಳು ಟಿ.ಅಣ್ಣಯ್ಯ, ಗೋವಿಂದನಹಳ್ಳಿ ಲೋಕೇಶ್, ಮಂಡ್ಯ ಎಪಿಎಂಸಿ ಅಧ್ಯಕ್ಷ ಮಹೇಂದ್ರ, ದಬ್ಬೇಘಟ್ಟ ಭರತ್, ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ನಾರ್ಗೋನಹಳ್ಳಿ ರವಿಶಂಕರ್, ಒಬಿಸಿ ಸಾಮಾಜಿಕ ಜಾಲತಾಣದ ಸಂಚಾಲಕರ ಭಾರತೀಪುರ ಶ್ರೀನಿವಾಸ್, ಬಿಜೆಪಿ ಮುಖಂಡ ಶಿವಪ್ರಸಾದ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: