December 21, 2024

Bhavana Tv

Its Your Channel

ಡಿವೈಡರ್ ಗೆ ಕಾರು ಡಿಕ್ಕಿ: ಕಾರಿನಲ್ಲಿದ್ದ ಯುವಕರು ಪ್ರಾಣಾಪಾಯದಿಂದ ಪಾರು

ನಾಗಮಂಗಲ: ರಸ್ತೆ ವಿಭಜಕಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳ್ಳೂರು ಕ್ರಾಸ್ ನಾ ಬೆಂಗಳೂರು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ದೇವನಹಳ್ಳಿ ಬಳಿ ಅಪಘಾತ ನಡೆದಿದೆ. ಬೆಂಗಳೂರಿನ ನಾಗರಬಾವಿ ನಿವಾಸಿಗಳಾದ ಅನಿಲ್ ಮತ್ತು ಅವರ ಕುಟುಂಬಸ್ಥರು ಶ್ರೀ ಮಂಜುನಾಥ ಸ್ವಾಮಿ ರವರ ಸೋಮವಾರದ ದರ್ಶನಕ್ಕೆಂದು ಭಾನುವಾರ ಸಂಜೆ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ಬೆಳ್ಳೂರು ಕ್ರಾಸ್ ದೇವಿಹಳ್ಳಿಯ ಬಳಿ ಕಾರಿನ ಹಿಂಬದಿ ಚಕ್ರದ ಬೇರಿಂಗ್ ಕಟ್ಟಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು ಅದೃಷ್ಟ ವರ್ಷ ಕಾರಿನಲ್ಲಿದ್ದ ಹೇರ್ ಬ್ಯಾಗ್ ಓಪನ್ ಆದುದರಿಂದ ಕಾರಿನಲ್ಲಿದ್ದ ಐವರು ಸಹ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: