December 22, 2024

Bhavana Tv

Its Your Channel

ತಾಲೂಕಿನ ಬೆಳ್ಕೆ ಹೈಸ್ಕೂಲಿನಲ್ಲಿ ಅಂತರ್ಜಲ ವಿಧ್ಯಾರ್ಥಿ ಜಾಗ್ರತಿ ಶಿಬಿರ

ಭಟ್ಕಳ: ಅಂತರ್ಜಲ ನಿರ್ದೆಶನಾಲಯ ಬೆಂಗಳೂರು ಮತ್ತು ಜಿಲ್ಲಾ ಅಂತರ್ಜಲ ಕಛೇರಿ ಕಾರವಾರ ಇದರ ಸಹಯೋಗದೊಂದಿಗೆ ಶುಕ್ರವಾರ ಭಟ್ಕಳ ತಾಲೂಕಿನ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಡ ಶಾಲೆ ಬೆಳ್ಕೆಯಲ್ಲಿ ಅಂತರ್ಜಾಲ ವಿಧ್ಯಾರ್ಥಿ ಜಾಗ್ರತಿ ಶಿಬಿರ ಹಮ್ಮಿಕೊಳ್ಳಲಾಯಿತು.

ಬೆಳ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ನಾಯ್ಕ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಇತ್ತಿಚಿಗೆ ನಮ್ಮಲ್ಲಿ ಅಂತರ್ಜಲ ಕೊರತೆಯು ಕಂಡುಬರುತ್ತಿದೆ ಹಾಗು ಜೊತೆಯಲ್ಲಿ ಅಂತರ್ಜಲ ಮಾಲಿನ್ಯವು ಕಂಡು ಬರುತ್ತಿದೆ ಇದಕ್ಕೆ ಮುಖ್ಯವಾಗಿ ಕಾರಣ ಮಾನವರಲ್ಲಿ ದಿನೆ ದಿನೆ ಬೇಳೆಯುತ್ತಿರುವ ಸ್ವಾರ್ಥ ಮನೊಭಾವನೆಯಾಗಿದೆ ಇಂದಿನ ಯುವ ಜನತೆ ಅಂತರ್ಜಲ ಹೆಚ್ಚಿಸುವತ್ತ ಗಮನಹರಿಸ ಬೇಕಾಗಿದೆ ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ತೊಟ್ಟು ನೀರಿಗಾಗಿ ಪರಿತಪಿಸ ಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂದು ಹೇಳಿದರು

error: