May 19, 2024

Bhavana Tv

Its Your Channel

ಅಕ್ರಮ ಗೋಸಾಗಟ ಪತ್ತೆ ಹಚ್ಚಿದ ಗ್ರಾಮಸ್ಥರು ಧರ್ಮದೇಟು ನೀಡುತ್ತಲ್ಲೇ ಸತ್ಯ ಬಾಯಿ ಬಿಟ್ಟ ಖದೀಮರು.

ಹೊನ್ನಾವರ ;ಜಿಲ್ಲೆಯ ವಿವಿಧಡೆ ಸಂಚಲನ ಮೂಡಿಸಿದ್ದ ಅಕ್ರಮ ಗೋಸಾಗಟ ಮತ್ತೊಮ್ಮೆ ಬೆಳಕಿಗೆ ಬಂದಿದ್ದು ಗುಣವಂತೆಯ ಮುಗುಳಿ ಬಳಿ ಶುಕ್ರವಾರ ಬೆಳಗಿನ ಜಾವ ಗ್ರಾಮಸ್ಥರೆ ಗೋಸಾಗಟ ನಡೆಸುವವರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಕರುಗಳನ್ನು, ರಸ್ತೆಗೆ ಸಮೀಪವಿರುವ ಕೊಟ್ಟಿಗೆಯೊಳಗಿನ ಗೋವುಗಳನ್ನು ಕಳುವು ಮಾಡಿ ಜನರ ನಿದ್ದೆಗೆಡಿಸಿದ್ದ, ಖತರ್ನಾಕ್ ಗೋ ಕಳ್ಳರ ಗ್ಯಾಂಗ್ ಒಂದು ಶುಕ್ರವಾರ ಬೆಳಗಿನ ಜಾವ ೪ ಗಂಟೆ ಸುಮಾರಿಗೆ ಮುಗಳಿಯಲ್ಲಿ ದನ ಕಳ್ಳತನ ಕೃತ್ಯದಲ್ಲಿರುವಾಗಲೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಳೆದೊಂದು ವರ್ಷದಿಂದ ಕೆಳಗಿನೂರು ಭಾಗದ ಅಪ್ಸರಕೊಂಡ, ಮುಗಳಿ, ನಾಜಗಾರ, ಹಕ್ಕಲಕೇರಿ ಮುಂತಾದ ಕಡೆ ರಾತ್ರಿ ಬೆಳಗಾಗುವುದರೊಳಗಾಗಿ ಅನೇಕ ಮನೆಯ ಕೊಟ್ಟಿಗೆಯೊಳಗಿದ್ದ ಜಾನುವಾರುಗಳು ಮಾಯವಾಗುತ್ತಿದ್ದವು. ಊರವರು ಒಟ್ಟಾಗಿ ರಾತ್ರಿ ಪಾಳಿಯಲ್ಲಿ ಕಾವಲು ಕಾದರೂ ಕಳ್ಳರ ಕೈಚಳಕ ಮಾತ್ರ ನಿಂತಿರಲಿಲ್ಲ. ವಾರದ ಹಿಂದೆ ಮುಗಳಿಯಲ್ಲಿ ಮನೆಯೆದುರು ಮಲಗಿದ್ದ ದನ ಒಂದನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋದ ಘಟನೆ ಜನರ ನೆಮ್ಮದಿ ಕೆಡಿಸಿತ್ತು. ಹೇಗಾದರೂ ಮಾಡಿ ಕಳ್ಳರನ್ನು ಹಿಡಿಯಲೇಬೇಕೆಂದು ವಾರದಿಂದ ರಾತ್ರಿ ನಿದ್ದೆಗೆಟ್ಟು ಕಾದವರ ಕೈಗೆ ಶುಕ್ರವಾರ ಬೆಳಗಿನ ಜಾವ ತವೆರಾ ಕಾರಿನಲ್ಲಿ ಬಂದು ಮುಗಳಿ ಶಾಲೆಯ ಬಳಿ ಇರುವ ಮನೆಯವರ ದನಕ್ಕೆ ಬ್ರೆಡ್ ತಿನ್ನಿಸಿ ಕಾಲನ್ನು ಕಟ್ಟುತ್ತಿರುವಾಗ ಕಾವಲು ಕಾಯುತ್ತಿದ್ದ ಯುವಕರು ಸುತ್ತುವರೆದು ಊರಿನ ಇತರರ ಸಹಕಾರಪಡೆದು ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಗೊಕಳ್ಳರನ್ನು ಹಿಡಿದ ವಿಷಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದೇ ತಡ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದರಾದರೂ ಮಂಕಿ ಠಾಣೆಯ ಪಿ.ಎಸ್.ಐ ಪರಮಾನಂದ ಕೊಣ್ಣೂರ್ ಮತ್ತವರ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶಕೊಡದೇ ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂದಿತರು ತಾವು ಭಟ್ಕಳ ಮೂಲದವರಾಗಿದ್ದು ಹೆಸರು ಮಹಮದ್ ಆದಿಲ್ ಡುಬ್ಬಾಳ, ಮಹಮದ್ ರಾಹೀನ್, ಮಹಮದ್ ರಾಹೀಕ್, ರಿಜ್ವಾನ್ ಅಬ್ದುಲ್ ರಶೀದ್ ಪಫಾರ್ ಎಂದು ತಿಳಿಸಿದ್ದಾರೆ.

error: