ತಾಲೂಕಿನ ಸರ್ವೆ ಇಲಾಖೆ ಸುಲಿಗೆ ಕೆಂದ್ರವಾಗಿದೆ. ೧೩೭ ಶಾಲೆಗಳು ಇನ್ನು ಮಣ್ಣಿನ ಕಟ್ಟಡದಿಂದಲೇ ಕೂಡಿದೆ. ತಾರಿಬಾಗಿಲು ಪ್ರಾಥಮಿಕ ಶಾಲೆಯಲ್ಲಿ ಮೇಲ್ಚಾವಣೆ ಕಳಚಿದ್ದು ಶಿಕ್ಷಣ ಇಲಾಖೆ ಆಕಾಶ ದರ್ಶನ ಕಾರ್ಯಕ್ರಮ ಮಾಡುವಂತಿದೆ,ಇದು ಶಾಸಕರ ಕೆಡಿಪಿ ಸಭೆಯಲ್ಲಿ ಕೇಳಿ ಬಂದ ಆರೋಪಗಳು.
ಹೊನ್ನಾವರ : ತಾಲೂಕ ಪಂಚಾಯತಿ ಸಬಾಭವನದಲ್ಲಿ ಶುಕ್ರವಾರ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ ನಡೆಯಿತು.
ಸರ್ವೆ ಇಲಾಖೆಯ ಕಾರ್ಯವೈಖರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಸರ್ವೆ ಇಲಾಖೆ ಹಪ್ತಾ ವಸೂಲಿ ಕೇಂದ್ರವಾಗಿದೆ. ೩ ತಿಂಗಳಿನಿAದ ಸರ್ವೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಣ ಕೊಟ್ಟವರಿಗೆ ಕೆಲಸ ಮಾಡಿಕೊಡುತ್ತಿರಿ. ನಿಮ್ಮ ಇಲಾಖೆ ಮಾರಿಕೊಂಡಿದ್ದೀರಾ? ಸಾರ್ವಜನಿಕರ ಕೆಲಸ ಮಾಡದೇ ಮಾಫಿಯಾ ಮಾಡಲು ಹೊರಟಂತೆ ಕಾಣುತ್ತದೆ. ಸರ್ಕಾರಿ ಸಂಬಳ ತೆಗೆದುಕೊಂಡು ಸರ್ಕಾರಕ್ಕೆ ದ್ರೋಹ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಪ್ಲೇನ್ ಪೇಪರಿನಲ್ಲಿ ಸಹಿ ಮಾಡಿಸಿಕೊಂಡು ನಂತರ ಎಜೆಸ್ಟಮೆಂಟ್ ಮಾಡಿಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದರು ತಾಲೂಕಿನಲ್ಲಿ ೫ರಿಂದ ೬ ವರ್ಷಗಳ ಬೇರುರಿದ ಅಧಿಕಾರಿಗಳನ್ನು ಎತ್ತಗಂಡಿ ಮಾಡಿದರೆ ಇಂತಹ ಸಮಸ್ಯೆ ಬಗೆಹರಿಯಬಹುದು ಎಂದರು . ಈವರೆಗೆ ಬಾಕಿ ಇರುವ ೧೧೦ ಪ್ರಕರಣವನ್ನು ೧ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ತಾಲೂಕಿನ ವ್ಯಾಪ್ತಿಯ ೧೩೭ ಶಾಲೆಗಳು ಇನ್ನು ಮಣ್ಣಿನ ಶಾಲಾ ಕಟ್ಟಡದಿಂದ ಕೂಡಿದೆ. ತಾರಿಬಾಗಿಲು ಪ್ರಾಥಮಿಕ ಶಾಲೆಯಲ್ಲಿ ಮೇಲ್ಚಾವಣೆ ಕಳಚಿದ್ದು ಶಿಕ್ಷಣ ಇಲಾಖೆ ಆಕಾಶ ದರ್ಶನ ಕಾರ್ಯಕ್ರಮ ಮಾಡುವಂತಿದೆ. ಸರ್ಕಾರಿ ಶಾಲೆ ಹೀನಾಯ ಸ್ಥಿತಿ ತಲುಪುತ್ತಿದೆ. ಇಂತಹ ಪರಿಸ್ಥಿತಿ ಇರುವ ಶಾಲಗೆಳು ಕಂಡಾಗ ಪೋಷಕರು ಖಾಸಗಿ ಶಾಲೆಯತ್ತ ಮುಖಮಾಡುವದರಲ್ಲಿ ಸಂದೇಹವಿಲ್ಲ. ಹೊಸಕಟ್ಟಡ ನಿರ್ಮಾಣ ಮಾಡುವತ್ತ ಗಮನಹರಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ತೋಟಗಾರಿಕಾ ಇಲಾಖಾ ಚರ್ಚೆಯಲ್ಲಿ ತಾ.ಪಂ ಅಧ್ಯಕ್ಷ ಉಲ್ಲಾಸ ನಾಯ್ಕ ಸಭೆಯಲ್ಲಿ ಮಾತನಾಡಿ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಸಿಗುವ ಯಂತ್ರೋಪಕರಣಗಳು ಮಾರುಕಟ್ಟೆ ದರಕ್ಕಿಂತ ಅಧಿಕವಾಗಿದೆ. ದರ ಹೆಚ್ಚಿಸಿ ಸಬ್ಸಿಡಿ ನೀಡುವದರಲ್ಲಿ ಅರ್ಥವಿಲ್ಲವಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆÀ ಚರ್ಚೆಯಲ್ಲಿ ಜಿ.ಪಂ ಸದಸ್ಯ ದೀಪಕ ನಾಯ್ಕ ಮಾತನಾಡಿ ಅವಧಿ ಮುಕ್ತಾಯದ ಹಂತದಲ್ಲಿರುವ ಅದರಲ್ಲಿಯು ಕಳಪೆ ಆಹಾರ ಧಾನ್ಯಗಳು ಪೂರೈಕೆಯಾಗುತ್ತಿದೆ. ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದರು. ಶಿಸು ಅಭಿವೃದ್ದಿ ಇಲಾಖೆ ಚರ್ಚೆಯಲ್ಲಿ ೨೦೧೩ರಲ್ಲಿ ತಯಾರಾದ ಆಹಾರ ಸಾಮಗ್ರಿಗಳನ್ನು ಈಗ ಅಂಗನವಾಡಿಗಳಿಗೆ ಪೂರೈಸಲಾಗುತ್ತಿದೆ ಎಂದು ಬಳಕೂರು ಕೇಶವ ನಾಯ್ಕ ಆರೋಪಿಸಿದರು. ಅಂತಹ ಆಹಾರ ಸಾಮಗ್ರಿಗಳನ್ನು ತಿರಸ್ಕರಿಸಿ. ಇಲ್ಲದಿದ್ದರೆ ನಿಮ್ಮನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಶಾಸಕರು ಸಿಡಿಓ ಅವರಿಗೆ ಸೂಚಿಸಿದರು.
ಸಾರಿಗೆ ಇಲಾಖೆ ಚರ್ಚೆಯಲ್ಲಿ ಶಾಸಕ ಸುನೀಲ್ ನಾಯ್ಕ ಇಲಾಖಾ ಅಧಿಕಾರಿಗಳಿಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹತ್ತಿರವಿದೆ ಗ್ರಾಮೀಣ ಭಾಗಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಒದಗಿಸಿ ಎಂದರು.ಈ ಕುರಿತು ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿ ಒಟ್ಟು ೩೦ ಸಿಬ್ಬಂದಿಗಳ ಕೊರತೆ ಇದೆ. ಆದ್ದರಿಂದ ಬಸ್ ಸಂಚಾರದಲ್ಲಿ ವ್ಯತ್ಯವಾಗುತ್ತಿದೆ ಎಂದರು.
ಆರೋಗ್ಯ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ, ಹೆಸ್ಕಾಂ, ಕೃಷಿ, ಬಂದರು, ಮೀನುಗಾರಿಕೆ, ಅಗ್ನಿಶಾಮಕ, ರೆಷ್ಮೇ ಮತ್ತಿತರ ಇಲಾಖೆ ಕುರಿತು ಚರ್ಚೆ ನಡೆಯಿತು. ಎಂದಿನAತೆ ಅಬಕಾರಿ, ಸಣ್ಣ ನೀರಾವರಿ ಗೈರು ಹಾಜರಾಗಿ ಸಬೆಯಲ್ಲಿ ಗದ್ದಲ,ಕೋಲಾಹಲ ಸೃಷ್ಠಿಯಾಗಲು ಕಾರಣವಾಯಿತು. ಸಭೆಯಲ್ಲಿ ತಾಲೂಕ ಕಾರ್ಯನಿರ್ವಹಣಾಧಿಕಾರಿ ಕರಿಂ ಅಸದಿ, ಜಿಲ್ಲಾ ಪಂಚಾಯತ ಸದಸ್ಯ ದೀಪಕ ನಾಯ್ಕ, ಶಿವಾನಂದ ಹೆಗಡೆ ಚರ್ಚೆಯಲ್ಲಿ ಪಾಲ್ಗೊಂಡರು.
……………………………….
ಸಭೆೆ ಮದ್ಯೆ ಆಗಾಗ ವಿದ್ಯುತ್ ವ್ಯತ್ಯಯ ಜೊತೆಗೆ ಮೈಕ್ ಸಿಸ್ಟಮ್‌ನಲ್ಲಿ ದೋಷ ಕಂಡುಬAದ್ದಿದ್ದು ಶಾಸಕ ಸುನೀಲ್ ತಾ.ಪಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ತಾ.ಪಂಗೆ ಬರುವ ಅನುದಾನದಲ್ಲಿ ಹೊಸ ಸಲಕರಣೆಗಳನ್ನಾದರು ಅಳವಡಿಸಿ ಎಂದು ಸೂಚಿಸಿದರು. ಮುಂದಿನ ಸಬೆಯಲ್ಲಿ ಇದೆ ಸಮಸ್ಯೆ ಎದುರಾದಲ್ಲಿ ನಾನೇ ಸಲಕರಣೆ ಕಿತ್ತು ಬಿಸಾಕುವೇ ಎಂದು ಗರಂ ಆದರು. ೫ ಜನ ಜಿಲ್ಲಾ ಪಂಚಾಯತ ಸದಸ್ಯರಲ್ಲಿ ದೀಪಕ ನಾಯ್ಕ, ಶಿವಾನಂದ ಹೆಗಡೆ ಹೊರತುಪಡಿಸಿ ೩ ಮಹಿಳಾ ಸದಸ್ಯರು ಗೈರಾಗಿದ್ದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.