March 29, 2024

Bhavana Tv

Its Your Channel

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಮಡಿವಾಳ ಮಾಚಿದೇವ ಜಯಂತ್ಯೋತ್ಸವ

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಸಮಾರಂಭವು ಕೃಷ್ಣರಾಜಪೇಟೆ ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿ ಅದ್ದೂರಿಯಾಗಿ ನಡೆಯಿತು…ಶಿವಶರಣ, ಮಹಾನ್ ಮಾನವತಾವಾದಿ, ಕಾಯಕಯೋಗಿ ಮಡಿವಾಳ ಮಾಚಿದೇವರ ಭಾವಚಿತ್ರವನ್ನು ಬೆಳ್ಳಿ ಸಾರೋಟಿನಲ್ಲಿಟ್ಟು ಜನಪದ ಕಲಾತಂಡಗಳೊAದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು …

ರಾಜ್ಯದ ಪೌರಾಢಳಿತ ಸಚಿವರ ಧರ್ಮಪತ್ನಿ ಶ್ರೀಮತಿ ದೇವಕಿ ನಾರಾಯಣಗೌಡ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಅವರ ಅನುಯಾಯಿಗಳಾಗಿ ಸಾಮಾಜಿಕ ಕ್ರಾಂತಿಗೆ ಜೊತೆಗೂಡಿ ಕೆಲಸ ಮಾಡಿದ ತಂದೆ ಮಡಿವಾಳ ಮಾಚಿದೇವರ ಜೀವನದ ಆದರ್ಶಗಳನ್ನು ಯುವಜನರು ಕಡ್ಡಾಯವಾಗಿ ಪಾಲಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶ್ರೀಮತಿ ದೇವಕಿ ಕರೆ ನೀಡಿದರು…

ಮೈಸೂರಿನ ಕೌಟಿಲ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಜನಪರ ಹೋರಾಟಗಾರ, ಮಡಿವಾಳ ಸಮಾಜದ ಮಾಣಿಕ್ಯವೆಂದೇ ಪ್ರಖ್ಯಾತವಾಗಿರುವ ರಘು ಕೌಟಿಲ್ಯ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ದುಡಿಯುವ ವರ್ಗ ಹಾಗೂ ಕಾಯಕ ವರ್ಗಗಳಿಗೆ ಶಕ್ತಿಯನ್ನು ತುಂಬಲು ನಮ್ಮನ್ನಾಳುತ್ತಿರುವ ಸರ್ಕಾರಗಳು ವಿಫಲವಾಗಿವೆ…ದುಡಿಯುವ ವರ್ಗಗಳು ಸಂಘಟಿತರಾಗಿ ತಮ್ಮ ಸಂವಿಧಾನಬದ್ಧವಾದ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ತಂದೆ ಮಡಿವಾಳ ಮಾಚಿದೇವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಆದರ್ಶ ಸಮಾಜ ಕಟ್ಟಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದ ರಘುಕೌಟಿಲ್ಯ ದುಡಿಯುವ ವರ್ಗಗಳು ಹಾಗೂ ಕಾಯಕವರ್ಗಗಳ ಪ್ರಾಮಾಣಿಕ ದುಡಿಮೆಯ ಫಲವಾಗಿ ರಾಷ್ಟ್ರವು ಸಮಗ್ರವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ…ಮಡಿವಾಳ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಪ್ರೇರೇಪಿಸಿ ಉತ್ತೇಜಿಸಬೇಕು ಎಂದು ಕರೆ ನೀಡಿ ಕೆ.ಆರ್.ಪೇಟೆ ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷರಾದ ಎಸ್.ಪಿ.ಸಿದ್ಧೇಶ್ ಅವರ ಕಾರ್ಯದಕ್ಷತೆಯನ್ನು ಶ್ಲಾಘಿಸಿದರು…

ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಜಿಪಂ ಸದಸ್ಯ ರಾಮದಾಸು, ಸೆಸ್ಕ್ ಎಇಇ ಕೃಷ್ಣ, ಸಹಾಯಕ ಎಂಜಿನಿಯರ್ ರಘು ಸೇರಿದಂತೆ ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು…

ಕುಂದೂರು ಜಗಧೀಶ್ ಅವರ ವೀರಭದ್ರ ನೃತ್ಯವು ಮೆರವಣಿಗೆಗೆ ವಿಶೇಷ ರಂಗನ್ನು ತಂದಿತ್ತಲ್ಲದೇ ಸಮಾರಂಭದ ಆಕರ್ಷಣೆಯ ಕೇಂದ್ರಬಿAದುವಾಗಿತ್ತು…..

error: