ಭಟ್ಕಳ: ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಢಳಿತ ಉತ್ತರ ಕನ್ನಡ. ಇವರ ಸಹಯೋಗದೊಂದಿಗೆ ಸ್ಕೂಬಾ ಡೈವಿಂಗ್ ಉತ್ಸವ -೨೦೨೦ ವನ್ನು ಶಾಸಕ ಸುನೀಲ ನಾಯ್ಕ ಮುರ್ಡೇಶ್ವರ ಆರ್.ಎನ್.ಎಸ್. ರೆಸಿಡೆನ್ಸ ಸಭಾಂಗಣದಲ್ಲಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸ್ಥಳೀಯವಾಗಿ ಸ್ಕೂಬಾ ಡೈವಿಂಗ್ ಬಗ್ಗೆ ಹೆಚ್ಚಿನ ಪ್ರಚಾರ ಅವಶ್ಯಕ. ಕೆಲವು ಅಪಪ್ರಚಾರದಿಂದ ಸ್ಕೂಬಾ ಡೈವಿಂಗ್ ಜನರು ಬರಲು ಹೆದರಿದ್ದರು. ಜಿಲ್ಲಾಢಳಿತದ ಪ್ರಯತ್ನಕ್ಕೆ ಪ್ರತಿಕೆಗಳು ಸಾಥ್ ನೀಡಬೇಕು. ಶ್ರೀಲಂಕಾದ ಸ್ನೇಹಿತರೊಂದಿಗೆ ಸ್ಕೂಬಾ ಡೈವಿಂಗ್ ತೆರಳಿದ ವೇಳೆ ಅಲ್ಲಿನ ಡೈವಿಂಗ್ ಕಛೇರಿಯಲ್ಲಿ ಮುರ್ಡೇಶ್ವರ ಸ್ಕೂಬಾ ಡೈವಿಂಗನ ಹೆಸರು ಇರುವುದು ಗಮನಕ್ಕೆ ಬಂದಿದೆ. ಜಿಲ್ಲಾಡಳಿತದ ಆಸಕ್ತಿ ಸಂತಸ ತಂದಿದ್ದು, ಮುಂದಿನ ದಿನದಲ್ಲಿ ಸ್ಕೂಬಾ ಡೈವಿಂಗ್ ಪ್ರಚಾರದ ಬಗ್ಗೆ ನಮ್ಮಿಂದಾಗಲಿ ಅಥವಾ ಜಿಲ್ಲಾಢಳಿತಕದಿಂದ ಹೆಚ್ಚಿನ ಕಾರ್ಯ ನಡೆಸಲಿದ್ದೇವೆ. ಮಾದ್ಯಮದವರು ನೇತ್ರಾಣಿ ಸ್ಕೂಬಾ ಡೈವಿಂಗ್ ಬಗ್ಗೆ ಪೂರಕ ಹೆಚ್ಚಿನ ವರದಿ ಪ್ರಚಾರ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ ಮಾತನಾಡಿ ‘ಸ್ಥಳೀಯರಿಗು ಇದರ ಅವಕಾಶ ಸಿಗಬೇಕು. ಈಗಾಗಲೇ ಹೆಚ್ಚಿನ ಜನರು ಆಸಕ್ತಿಯಿಂದ ಬರುತ್ತಿದ್ದಾರೆ. ಕಳೆದ ನೆರೆ ಹಾವಳಿಯಿಂದ ಯಾವುದೇ ಉತ್ಸವ ನಡೆಸಿಲ್ಲವಾಗಿದೆ. ಆದರೆ ಕಳೆದ ಕೆಲ ದಿನದ ಹಿಂದೆ ಕರಾವಳಿ ಉತ್ಸವ, ಗಾಳಿಪಟ ಉತ್ಸವ ಯಶಸ್ವಿಯಾಗಿ ನಡೆಸಿದ್ದೇವೆ. ಸರಕಾರದ ಜೊತೆಗೆ ಖಾಸಗಿ ಅವರ ಪಾತ್ರವೂ ಪ್ರಮುಖವಾದದ್ದು. ಇದರಿಂದ ಖಾಸಗಿ ಅವರು ಪೈಪೋಟಿ, ಆಸಕ್ತಿ ಹಾಗೂ ಹೆಚ್ಚಿನ ಜನರಿಗೆ ತಲುಪಲು ಪ್ರಯತ್ನಿಸುತ್ತಾರೆ. ಎರಡು ದಿನದ ಈ ಉತ್ಸವದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರವಾಸೋದ್ಯಮದ ಬೆಳವಣಿಗೆಗೆ ಮಾದ್ಯಮದವರು ಸಹಕರಿಸಬೇಕು. ಪತ್ರಕರ್ತರು ಸಹಾಯ ಸಹಕಾರವೂ ಅವಶ್ಯವಿದೆ. ಜನರಿಗೆ ಪೂರಕವಾಗಿ ವರದಿಗಳು ಬರಬೇಕು. ಸ್ಕೂಬಾ ಡೈವಿಂಗನಲ್ಲಿ ಡೈವರ್ಸಗಳು ನೀಡುವ ಪೂರಕ ರಕ್ಷಣೆಯನ್ನು ಬಳಸಬೇಕು ಹಾಗು ಸಮುದ್ರದೊಳಗಿನ ಉತ್ತಮ ಲೋಕವನ್ನು ನೋಡಿ ಆನಂದಿಸಿ ಎಂದರು.
ಕಾರವಾರ ಡಿಎಪ್‌ಒ ವಸಂತ ರೆಡ್ಡಿ ಮಾತನಾಡಿ’ ಅಂಡಮಾನ ನಿಕೋಬಾರನಲ್ಲಿ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ಆದರೆ ನೇತ್ರಾಣಿ ಸ್ಕೂಬಾ ಡೈವಿಂಗ್ ವಿಶೇಷ ಅನುಭವದೊಂದಿಗೆ ಸಾಹಸವೇ ಸರಿ. ಸಮುದ್ರದಾಳದ ಜಗತ್ತೇ ಬೇರೆಯಾಗಿದ್ದು ಅದರ ಅನುಭವವನ್ನು ಪಡೆದುಕೊಳ್ಳಬೇಕು. ಒಮೆನನಿಂದ ವಿಶೇಷ ಜಾತಿಯ ಮೀನು ತನ್ನ ತಂಡದೊAದಿಗೆ ವರ್ಷದ ಒಂದು ಸಂವತ್ಸರದಲ್ಲಿ ನೇತ್ರಾಣಿ ದ್ವೀಪಕ್ಕೆ ಬರಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಜಾತಿಯ ಮೀನು ನಶಿಸುತ್ತಿದ್ದು ಇದರ ಉಳಿವಿಗೆ ಒಂದು ಯೋಜನೆಯು ಆರಂಭವಾಗಿದೆ. ಇದು ಮುಂದುವರೆಯುತ್ತಿದೆ. ಕಡಲಾಮೆಯ ಸಂರಕ್ಷಣೆ ಅಳಿವಿಗಾಗಿ ಕರಾವಳಿಯಲ್ಲಿ ಈ ಕಾರ್ಯ ನಡೆಯುತ್ತಿದೆ.
ನೇತ್ರಾಣಿ ಸ್ಕೂಬಾ ಡೈವಿಂಗ್ ಅತ್ಯಂತ ಸುರಕ್ಷಿತವಾಗಿ ತಂಡವಾಗಿದ್ದು, ಎಲ್ಲಾ ನುರಿತ ಡೈವರ್ಸಗಳಿಂದ ಸ್ಕೂಬಾ ಡೈವಿಂಗ್ ನಡೆಸುತ್ತಿದ್ದಾರೆ ಎಂದರು.
ಸಹಾಯಕ ಆಯುಕ್ತ ಸಾಜಿದ್ ಅಹ್ಮದ ಮುಲ್ಲಾ ವಂದಿಸಿದರು. ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನೇತ್ರಾಣಿ ಸ್ಕೂಬಾ ಡೈವಿಂಗನ ದ್ವೀಪಕ್ಕೆ ಸ್ಪೀಡ್ ಬೋಟ್ ಮೂಲಕ ನೇತ್ರಾಣಿ ಸ್ಕೂಬಾ ಡೈವಿಂಗ್ ಸಂಯೋಜಕರು ನುರಿತ ಡೈವರ್ಸಗಳೊಂದಿಗೆ ೬೦ ಕ್ಕೂ ಅಧಿಕ ಕಾರವಾರ, ಭಟ್ಕಳ ಪತ್ರಕರ್ತರು ಜಿಲ್ಲೆ ಹಾಗೂ ತಾಲೂಕಾಡಳಿತ ಸಿಬ್ಬಂದಿಗಳು ಸ್ಕೂಬಾ ಡೈವಿಂಗನಲ್ಲಿ ಪಾಲ್ಗೊಂಡರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.